Health Tips: ಹಿಂದಿನ ಕಾಲದಲ್ಲಿ ವಯಸ್ಸು 70 ದಾಟಿದ್ರೂ, ಹಿರಿಯರು ಕನ್ನಡಕವಿಲ್ಲದೆಯೂ ಅಕ್ಷರ ಓದುವಷ್ಟು ಸ್ಪಷ್ಟವಾದ ಕಣ್ಣಿನ ಆರೋಗ್ಯ ಹೊಂದಿದ್ದರು. ಆದರೆ ಇಂದಿನ ಕಾಲದಲ್ಲಿ ಚಿಕ್ಕ ಚಿಕ್ಕ ಮಕ್ಕಳಿಗೆ ಕನ್ನಡಕ ಬರುತ್ತಿದೆ. ಬೋರ್ಡ್ ಮೇಲೆ ಟೀಚರ್ ಬರೆಯುವ ಅಕ್ಷರ ಕಾಣಿಸೋದಿಲ್ಲಾ ಅಮ್ಮಾ ಅಂತಾ ಹೇಳುವ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ ಸಣ್ಣ ವಯಸ್ಸಿಗೆ ಮಕ್ಕಳಿಗೆ ದೃಷ್ಟಿದೋಷ ಬರಲು ಕಾರಣವೇನು..? ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ವಿವರಿಸಿದ್ದಾರೆ.
ತಾಯಿ ಗರ್ಭಿಣಿಯಾಗಿದ್ದಾಗ, ಆರೋಗ್ಯಕರ ಆಹಾರ ಸೇವಿಸಿಲ್ಲ. ಅಥವಾ ಹೆಚ್ಚು ಟಿವಿ, ಮೊಬೈಲ್ ನೋಡುವುದು. ಅಥವಾ ಪೌಷ್ಟಿಕಾಂಶಯುಕ್ತ ಆಹಾರ ಸೇವಿಸದೇ ಇದ್ದಾಗ, ಮಕ್ಕಳಿಗೆ ಇರುಳುಗಣ್ಣು, ದೃಷ್ಟಿ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಗರ್ಭಿಣಿಯಾಗಿದ್ದಾಗ, ನಾವು ಎಷ್ಟು ಆರೋಗ್ಯಕರ ಆಹಾರ ಸೇವನೆ ಮಾಡುತ್ತೆವೋ, ಎಷ್ಟು ಆರೋಗ್ಯದ ಬಗ್ಗೆ ಕಾಳಜಿ ಮಾಡುತ್ತೇವೋ, ಅಷ್ಟು ಉತ್ತಮ ಎನ್ನಲಾಗಿದೆ.
ಇನ್ನು ಮಕ್ಕಳಿಗೆ ನಾವು ಯಾವ ರೀತಿಯ ಆಹಾರ ನೀಡುತ್ತಿದ್ದೇವೆ ಎಂಬ ಬಗ್ಗೆ ನಾವು ಯೋಚನೆ ಮಾಡಬೇಕಾಗುತ್ತದೆ. ಇಂದಿನ ಕಾಲದಲ್ಲಿ ಮಕ್ಕಳಿಗೆ ಹೆಚ್ಚು ಮೈದಾದಿಂದ ಮಾಡಿದ ತಿಂಡಿ, ಬೇಕರಿ ತಿಂಡಿ, ಹೊಟೇಲ್‌ನಲ್ಲಿ ಸಿಗುವ ತಿಂಡಿಯನ್ನೇ ಕೊಡಲಾಗುತ್ತದೆ. ಏಕೆಂದರೆ, ಎಷ್ಟೋ ಹೆಣ್ಣು ಮಕ್ಕಳು ಮನೆಯಲ್ಲಿ ಸ್ನ್ಯಾಕ್ಸ್ ಮಾಡಲು ಆಲಸ್ಯ ತೋರುತ್ತಾರೆ. ಆದರೆ ಈ ಆಲಸ್ಯವೇ ಮಕ್ಕಳ ಆರೋಗ್ಯ ಹಾಳು ಮಾಡುತ್ತದೆ.
ಹಾಗಾಗಿ ಮಕ್ಕಳಿಗೆ ಆದಷ್ಟು ಆರೋಗ್ಯಕರ ಆಹಾರವನ್ನು ನೀಡಿದರೆ, ಮಗುವಿನ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ, ಮಕ್ಕಳಿಗೆ ಹೆಚ್ಚು, ಮೊಬೈಲ್, ಟಿವಿ ನೋಡುವ ಹವ್ಯಾಸ ಬೆಳೆಯದಂತೆ ನೋಡಿಕೊಳ್ಳಿ. ಕೆಲವು ಅಪ್ಪ-ಅಮ್ಮ ತಮಗೆ ಸಮಯ ಬೇಕು ಎಂದು ಮಕ್ಕಳ ಕೈಗೆ ಮೊಬೈಲ್ ನೀಡುತ್ತಾರೆ. ಟಿವಿ ಹಾಕಿ ಕೊಟ್ಟು ತಮ್ಮ ತಮ್ಮ ಕೆಲಸಕ್ಕೆ ಹೋಗುತ್ತಾರೆ. ಈ ಚಟದಿಂದಲೂ, ದೃಷ್ಟಿದೋಷ ಉಂಟಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಗಾಗಿ ವೀಡಿಯೋ ನೋಡಿ.