ವಿಚ್ಛೇದನ ವದಂತಿ ನಡುವೆ ಕ್ರಿಕೇಟಿಗ ಯಜುವೇಂದ್ರ ಚಹಲ್ ಫುಲ್ ಟೈಟ್ ಆಗಿರುವ ವೀಡಿಯೋ ವೈರಲ್

Cricket News: ಭಾರತೀಯ ಕ್ರಿಕೇಟ್ ತಂಡದ ಆಟಗಾರ ಯಜುವೇಂದ್ರ ಚಹಲ್ ತಮ್ಮ ಡಿವೋರ್ಸ್ ವದಂತಿಯಿಂದ ಸುದ್ದಿಯಲ್ಲಿದ್ದಾರೆ. ಪತ್ನಿ ಧನಶ್ರೀ ವರ್ಮಾ ವಿಚ್ಛೇದನ ಕೋರಿದ್ದು, ಚಹಲ್ ಆಸ್ತಿಯಲ್ಲಿ ಶೇ.50ರಷ್ಟು ಭಾಗ ಆಸ್ತಿ ನೀಡಬೇಕು ಎಂದು, ಧನುಶ್ರೀ ಡಿಮ್ಯಾಂಡ್ ಮಾಡಿದ್ದಾರೆ. ಇದೀಗ ಹೊಸ ವರ್ಷಕ್ಕೆ ಈ ಸುದ್ದಿ ಹರಡುತ್ತಿರುವ ಬೆನ್ನಲ್ಲೇ, ಚಹಲ್ ಕಂಠಪೂರ್ತಿ ಕುಡಿದು, ನಿಲ್ಲದ ಸ್ಥಿತಿಗೆ ಬಂದಿದ್ದು, ಅವರನ್ನು ಓರ್ವ ವ್ಯಕ್ತಿ ಕರೆದುಕೊಂಡು ಹೋಗಿ ಕಾರ್‌ನಲ್ಲಿ ಕುರಿಸಿದ್ದಾನೆ.

ಸದ್ಯ ಈ ವೀಡಿಯೋ ಹೆಚ್ಚು ವೈರಲ್ ಆಗುತ್ತಿದ್ದು, ಇದು ಯಾವ ಸಮಯದಲ್ಲಿ ನಡೆದ ಘಟನೆ ಅಂತ ಯಾರಿಗೂ ಗೊತ್ತಿಲ್ಲ. ಆದರೆ ವಿಚ್ಛೇದನನಿಂದ ಮನನೊಂದು ಚಹಲ್ ಈ ರೀತಿ ಕುಡಿದಿದ್ದಾರೆ ಎಂದೇ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹರಿದಾಡುತ್ತಿದೆ.

2020ರಲ್ಲಿ ಚಹಲ್ ಧನುಶ್ರೀಯನ್ನು ಪ್ರೀತಿಸಿ ಮದುವೆಯಾಗಿದ್ದರು. ಧನುಶ್ರೀ ಡಾನ್ಸರ್ ಆಗಿದ್ದು, ಆಕೆಯ ಬಳಿ ಡಾನ್ಸ್ ಕಲಿಯಲು ಹೋಗಿದ್ದ ಚಹಲ್, ಆಕೆಯೊಂದಿಗೆ ಪ್ರೀತಿಯಲ್‌ಲಿ ಬಿದ್ದಿದ್ದರು. ಬಳಿಕ ವಿವಾಹವಾಗಿದ್ದು, ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ಬಿರುಕು ಮೂಡಿದೆ. ಇಷ್ಟು ದಿನ ಇದು ಗಾಸಿಪ್ ಎನ್ನಲಾಗಿತ್ತು. ಆದರೆ ಚಹಲ್‌ ಮತ್ತು ಧನುಶ್ರೀ ಇಬ್ಬರೂ ಇನ್‌ಸ್ಟಾದಲ್ಲಿ ಒಬ್ಬರನ್ನೊಬ್ಬರು ಅನ್‌ಫಾಲೋ ಮಾಡಿದ್ದಾರೆ. ಅಲ್ಲದೇ, ಜೊತೆ ಜೊತೆಯಾಗಿರು ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ.

About The Author