Kalaburagi News: ಕಲಬುರಗಿ: ಕಲಬುರಗಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಈ ಮೇಲ್ ಬಂದಿದೆ. ಉದಯ್ ಸೇತುಪತಿ ಎಂಬುವವನ ಮೇಲ್‌ನಿಂದ ಈ ಸಂದೇಶ ಬಂದಿದ್ದು, ಈ ತಮಿಳುನಾಡಿನವನು ಎನ್ನಲಾಗಿದೆ.
ಯಾಕೆ ಈ ಬೆದರಿಕೆ ಸಂದೇಶವೆಂದು ನೋಡೋದಾದ್ರೆ, ಪೋಕ್ಸೊ ಪ್ರಕರಣದ ಆರೋಪಿಗಳಾದ ಆರ್ ಜೆ ಶರಣ್ ಜಯರಾಮ್ , ಜಲ್ಲಿಕಟ್ಟು ಜ್ಯೂಲಿ ಎಂಬುವವರನ್ನು ಕಲಬುರಗಿ ಪೋಲೀಸರು ಬಂಧಿಸಿ, ಜೈಲಿನಲ್ಲಿ ಇರಿಸಿದ್ದಾರೆ. ಹಾಗಾಗಿ ಇದು ನಿರ್ಭಯಾ ರೇಪ್ ಪ್ರಕರಣದ ರೇಂಜಿಗಿರುವ ಆರೋಪಿಗಳಲ್ಲವಾದ್ದರಿಂದ ಇವರನ್ನು ಬಿಡಬೇಕು. ಇಲ್ಲವಾದಲ್ಲಿ ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ.
ನಾಲ್ಕು ಆರ್ ಡಿ ಎಕ್ಸ್ ಐಇಡಿಎಸ್ ಬಿಟ್ಟು, ಮಧ್ಯಾಹ್ನ 2 ಗಂಟೆಗೆ ಬಾಂಬ್ ಬ್ಲಾಸ್ಟ್ ಮಾಡುವ ಬೇದರಿಕೆ ಹಾಕಲಾಗಿದೆ. ಬಾಂಬ್ ಬೇದರಿಕೆ ಮೇಲ್ ಕಂಡು, ಸಿಬ್ಬಂದಿಗಳು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ತಕ್ಷಣ ಸ್ಟೇಷನ್ ಬಜಾರ್ ಪೊಲೀಸರು ಸೇರಿ ಬಾಂಬ್ ಸ್ಕಾಡ್ ಡಾಗ್ ಸ್ಕಾಡ್ ನವರು ಪರಿಶೀಲನೆ ಆರಂಭಿಸಿದ್ದಾರೆ.




