Recipe: ಬೇಕಾಗುವ ಸಾಮಗ್ರಿ: 4ರಿಂದ 5 ಬೇಯಿಸಿದ ಆಲೂಗಡ್ಡೆ, ಮೂರ್ನಾಲ್ಕು ಸ್ಪೂನ್ ಕಾರ್ನ್ ಫ್ಲೋರ್, 1 ಕಪ್ ಕರ್ಡ್, ಚಾಟ್ ಮಸಾಲೆ, ಗರಂ ಮಸಾಲೆ, ದಾಳಿಂಬೆ ಹಣ್ಣು, ಕೊತ್ತೊಂಬರಿ ಸೊಪ್ಪು, ಸ್ವಲ್ಪ ತುಪ್ಪ ಅಥವಾ ಎಣ್ಣೆ, ಸ್ವಲ್ಪ ಗ್ರೀನ್ ಚಟ್ನಿ, ಹುಣಸೆ ಚಟ್ನಿ, ಸೇವ್,
ಮಾಡುವ ವಿಧಾನ: ಆಲೂಗಡ್ಡೆ ಬೇಯಿಸಿ, ಅದರ ಸಿಪ್ಪೆ ತೆಗೆದು ತುರಿಯಿರಿ. ಬಳಿಕ 3ರಿಂದ 4 ಸ್ಪೂನ್ ಕಾರ್ನ್ ಫ್ಲೋರ್, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಬಳಿಕ ಈ ಮಿಶ್ರಣಕ್ಕೆ ಕಟ್ಲೆಟ್ ರೀತಿ ಶೇಪ್ ನೀಡಿ. 1 ಪ್ಯಾನ್‌ಗೆ ತುಪ್ಪ ಹಾಕಿ, ಕಟ್ಲೆಟ್ ನ್ನು ಅದರಲ್ಲೇ ಲೈಟ್ ಆಗಿ ರೋಸ್ಟ್ ಮಾಡಿ. ಉರಿ ಮಂದವಾಗಿರಲಿ. ಕರಿದ ಬಳಿಕ ಇದನ್ನು ಸ್ವಲ್ಪ ಚಪ್ಪಟೆ ಮಾಡಿ, ಮತ್ತೆ ತವ್ವಾ ಫ್ರೈ ಮಾಡಿ. ನಂತರ ಸರ್ವಿಂಗ್ ಪ್ಲೇಟ್ಗೆ ಹಾಕಿ.
ನಂತರ ಇದರ ಮೇಲೆ ಗಾರ್ನಿಶ್ ಮಾಡಿ. ಕರ್ಡ್, ಚಾಟ್ ಮಸಾಲೆ, ಗರಂ ಮಸಾಲೆ, ದಾಳಿಂಬೆ ಹಣ್ಣು, ಕೊತ್ತೊಂಬರಿ ಸೊಪ್ಪು, ಗ್ರೀನ್ ಚಟ್ನಿ, ಹುಣಸೆ ಚಟ್ನಿ, ಸೇವ್, ಉದ್ದಕ್ಕೆ ಕತ್ತರಿಸಿದ ಈರುಳ್ಳಿ, ಕ್ಯಾರೇಟ್, ಬೀಟ್‌ರೂಟ್, ಜಿಂಜರ್ ಹಾಕಿ ಗಾರ್ನಿಶ್ ಮಾಡಿ, ಸರ್ವ್ ಮಾಡಿ.




