ಮಕ್ಕಳ ಸಮ್ಮುಖದಲ್ಲಿ ಬಹುಕಾಲದ ಗೆಳತಿಯನ್ನು ವಿವಾಹವಾದ ಕ್ರಿಸ್ಟಿಯಾನೋ ರೋನಾಲ್ಡೊ

Sports News: ಹಲವು ವರ್ಷಗಳಿಂದ ಲಿವ್ ಇನ್ ರಿಲೆಶನ್‌ಶಿಪ್‌ನಲ್ಲಿದ್ದು, ಮಕ್ಕಳು ಜನಿಸಿದ ಬಳಿಕ ಇದೀಗ ಫುಟ್‌ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಬಹುಕಾಲದ ಗೆಳತಿ ಜಾರ್ಜಿನಾ ರೋಡ್ರಿಗಸ್ ಅವರನ್ನು ವಿವಾಹವಾಗಿದ್ದಾರೆ.

ಪೋರ್ಚುಗಲ್‌ನ ಕಾಸ್ಕೈಸ್ ಎಂಬಲ್ಲಿ ವಿವಾಹ ನೇರವೇರಿದ್ದು, ಸರಳವಾಗಿರುವ ವಿವಾಹದಲ್ಲಿ ದಂಪತಿಯ ಐವರು ಮಕ್ಕಳು ಮತ್ತು ಕೆಲ ಆಪ್ತ ಸಂಬಂಧಿಕರು ಮಾತ್ರ ಭಾಗವಹಿಸಿದ್ದರು. ಕಳೆದ ವರ್ಷ ಆ.11ರಂದು ಈ ದಂಪತಿಯ ನಿಶ್ಚಿತಾರ್ಥವಾಗಿದ್ದು, ಈ ವರ್ಷ ಅದೇ ದಿನಾಂಕಕ್ಕೆ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.

 

About The Author