ರಾಜಸ್ಥಾನ: ಪ್ರಧಾನಿ ನರೇಂದ್ರ ಮೋದಿ ಉಚಿತ ಲ್ಯಾಪ್‌ಟಾಪ್ ನೀಡುತ್ತಿದ್ದಾರೆ. ಈ ಯೋಜನೆಗಾಗಿ ನಿಮ್ಮ ಹೆಸರು ನೋಂದಾಯಿಸಿ ಅಂತ ಕೆಲ ದಿನಗಳ ಹಿಂದೆ ಕಾಣಿಸಿಕೊಳ್ಳುತ್ತಿದ್ದ ಜಾಹೀರಾತಿನ ವಂಚನೆ ಇದೀಗ ಬಟಾಬಯಲಾಗಿದೆ.
ಪ್ರಧಾನ ಮಂತ್ರಿ ಉಚಿತ ಲ್ಯಾಪ್ ಟಾಪ್ ವಿತರಣಾ ಯೋಜನೆಯಲ್ಲಿ 2 ಕೋಟಿ ಯುವಕರಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲಾಗುತ್ತೆ ಅಂತ ಸುಳ್ಳು ಮಾಹಿತಿ ನೀಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಉಚಿತ ಲ್ಯಾಪ್ ಟಾಪ್ ಯೋಜನೆಯ ಸಂದೇಶದ ಕುರಿತಾದ ಲಿಂಕ್ ಒತ್ತಿದಾಗ, ಅಲ್ಲಿ ನಿಮ್ಮ ಪೂರ್ಣ ಹೆಸರು, ನಿಮ್ಮ ರಾಜ್ಯದ ಹೆಸರು ಹಾಗೂ ಯಾವ ಬ್ರ್ಯಾಂಡ್ ಲ್ಯಾಪ್ ಟಾಪ್ ಬೇಕೆಂಬ ಬಗ್ಗೆ ಮಾಹಿತಿ ತೆಗೆದುಕೊಂಡು. ಈ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿದ ಬಳಿಕ ಇದನ್ನು ಕನಿಷ್ಠ 12 ಜನರಿಗೆ ಕಳುಹಿಸುವಂತೆ ಹೇಳಲಾಗುತ್ತಿತ್ತು. ಈ ಮೂಲಕ ಲಕ್ಷಾಂತರ ಮಂದಿಯ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿತ್ತು.
ಇನ್ನು ಈ ಕುರಿತು ತನಿಖೆ ನಡೆಸಿದ ಪೊಲೀಸರು ಇದೊಂದು ಸುಳ್ಳು ಜಾಹೀರಾತು ಎಂದು ಪತ್ತೆ ಹಚ್ಚಿ. ರಾಜಸ್ಥಾನ ಮೂಲದ ರಾಕೇಶ್ ಜಾಂಗಿದ್ ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಇನ್ನು ಬಂಧಿತ ಐಐಟಿ ಪದವೀಧರನಾಗಿದ್ದು, ಈ ಸುಳ್ಳು ಜಾಹೀರಾತಿನಿಂದ ಇನ್ನೂ ಲಕ್ಷಾಂತರ ಮಂದಿಯ ವಿವರವನ್ನು ಸಂಗ್ರಹಿಸಿ ಸೈಬರ್ ಕ್ರಿಮಿನಲ್ ಗಳಿಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಅಂತ ಪೊಲೀಸರು ತಿಳಿಸಿದ್ದಾರೆ.
ಭಾರತಕ್ಕೆ ದೊಡ್ಡ ಶಾಕ್ ನೀಡಿದ ಅಮೆರಿಕ… !ಮಿಸ್ ಮಾಡದೇ ಈ ವಿಡಿಯೋ ನೋಡಿ