ಬೆಂಗಳೂರು: ಹೆಬ್ಬಾಳ ಬಳಿ ಮಸೀದಿಯ ಆವರಣದಲ್ಲಿ ಸಿಲಿಂಡರ್ ಸ್ಫೋಟವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.ನಾಗವಾರ ಕಡೆಯಿಂದ ಹೆಬ್ಬಾಳಕ್ಕೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ. ಮಸೀದಿ ಅವರಣದಲ್ಲಿ ಗ್ಯಾಸ್ ಸ್ಟೌ ರಿಪೇರಿ ಅಂಗಡಿಯಿತ್ತು. ಅಂಗಡಿಯಲ್ಲಿ ಇದ್ದ ಗ್ಯಾಸ್ ಸಿಲಿಂಡರ್ನಿಂದ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗೋವಿಂದ ಪುರ ಪೊಲೀಸರು ಭೇಟಿ ನೀಡಿದ್ದಾರೆ.
ಶಾರ್ಟ್ ಸರ್ಕ್ಯೂಟ್ ನಿಂದ ಸಿಲಿಂಡರ್ ಬ್ಲಾಸ್ಟ್ ಆಗಿದೆ. ಮಸೀದಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಸ್ಥಳೀಯ ನಿವಾಸಿ ರಹಮತುಲ್ಲಾ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಮಾಲೀಕರಿಗೆ ಹಾಗೂ ಕೆಲಸದ ಸಿಬ್ಬಂದಿಗೆ ಸಣ್ಣ ಮಟ್ಟದ ಗಾಯ ಆಗಿದೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಗ್ಯಾಸ್ ರಿಫೀಲಿಂಗ್ ಹಾಗೂ ಗ್ಯಾಸ್ ಸ್ಟೌವ್ ರಿಪೇರಿ ಮಾಡೋ ಅಂಗಡಿ ಅದಾಗಿದ್ದು, ಬೆಳಗ್ಗೆ 11:30 ರ ಸುಮಾರಿಗೆ ಬ್ಲಾಸ್ಟ್ ಆಗಿದೆ ಎಂದು ರಹಮ ತುಲ್ಲಾ ನುಡಿದಿದ್ದಾರೆ.