ಬೇಕರಿಯಲ್ಲಿ ಸಿಲೆಂಡರ್ ಸ್ಪೋಟ: ಗಾಯಾಳುವಿಗೆ ವೇತನವೂ ಇಲ್ಲ, ಮಾಲೀಕನಿಂದ ಸೌಜನ್ಯದ ಭೇಟಿಯೂ ಇಲ್ಲ.

Hassan News: ಬೇಕರಿಯಲ್ಲಿನ ಸಿಲೆಂಡರ್ ಸ್ಪಟವಾಗಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡರು ಬೇಕರಿ ಮಾಲೀಕ ತಿರುಗಿಯು ನೋಡುವಷ್ಟು ಸೌಜನ್ಯ ಇಲ್ಲದೆ ಗಾಯಾಳು ಒಬ್ಬನೇ ನಗರದ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಮಾನವೀಯ ಘಟನೆ ನಡೆದಿದೆ.

ಸಕಲೇಶಪುರ ಮೂಲದ ಅಭಿ ಗಂಭೀರ ಗಾಯಗೊಂಡಿರುವ ಯುವಕನಾಗಿದ್ದು, ಈತನಿಗೆ ತಂದೆ ತಾಯಿ ಯಾರು ಇಲ್ಲದೆ ಅನಾಥ ಯುವಕನಾಗಿದ್ದಾನೆ. ಕಳೆದ 8 ವರ್ಷಗಳಿಂದ ನಗರದ ಹರ್ಷ ಮಹಲ್ ರಸ್ತೆಯಲ್ಲಿರುವ ಬಾಲಕರ ಬಾಲ ಮಂದಿರದಲ್ಲಿ ಆಶ್ರಯ ಪಡೆದಿದ್ದ ಈತ. ಸ್ನೇಹಿತರ ಸಲಹೆ ಮೇರೆಗೆ, ಕಳೆದ ಎರಡು ತಿಂಗಳ ಹಿಂದೆಯಷ್ಟೆ ಆಂದ್ರ ರಾಜ್ಯದ ತೆಲಂಗಾಣದಲ್ಲಿ ಬೇಲೂರು ಹಾಲ್ತೋರೆ ನಿವಾಸಿ ಪ್ರತಾಪ್ ಗೌಡ ಮಾಲೀಕತ್ವದ ಬೇಕರಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದ.

ಜೂ. 2 ರಂದು ಬೆಳಿಗ್ಗೆ ಎಂದಿನಂತೆ ಬೇಕರಿ ಬಾಗಿಲು ತೆಗೆಯಲಾಗಿ, ಅದೇ ವೇಳೆ ಸಿಲಿಂಡರ್ ಸ್ಪಟವಾಗಿದೆ ಈ ವೇಳೆ ಅಕ್ಕಪಕ್ಕದ ಅಂಗಡಿ ಗ್ರಾಮದಲ್ಲಿರುವ ಹಾಗೂ ಸಾರ್ವಜನಿಕರ ಸಹಕಾರದಿಂದ ತಕ್ಷಣ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಲಾಗಿದೆ. ಈ ವೇಳೆ ಮಾಲೀಕ ಪ್ರತಾಪ್ ಗೌಡ ಆಸ್ಪತ್ರೆಗೆ ಆಗಮಿಸಿ 5 ಸಾವಿರ ಹಣ ನೀಡಿ ಊರಿಗೆ ವಾಪಸ್ ತೆರಳುವಂತೆ ಹೇಳಿದ್ದಾರೆ.

ಗಂಭೀರ ಗಾಯಗೊಂಡಿದ್ದರು ಸ್ನೇಹಿತನ ಜೊತೆ ಬಸ್ಸಿನಲ್ಲೇ ಪ್ರಯಾಣ ಬೆಳೆಸಿ ಹಾಸನ ತಲುಪಿದ್ದಾರೆ. ನಂತರ ಹಾಸನದ ಸ್ನೇಹಿತರು ಪರಿಸ್ಥಿತಿ ಅರಿತು ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಈ ಬಗ್ಗೆ ಗಾಯಾಳು ಅಭಿ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ವೇತನವನ್ನು ಕೊಡದೆ ಗಾಯಾಳುವಾಗಿ ನರಳುತ್ತಿದ್ದರು ಮಾಲೀಕ ಪ್ರತಾಪ್ ಗೌಡ ಇದುವರೆಗೂ ಬಂದು ನೋಡಿಲ್ಲ,. ಕೂಡಲೇ ಪೊಲೀಸ್ ಇಲಾಖೆ ಅವರ ವಿರುದ್ದ ಕ್ರಮ ಕೈಗೊಳ್ಳುವ ಜೊತೆಗೆ, ತನಗೆ ನೀಡಬೇಕಾದ ವೇತನದ ಜೊತೆಗೆ, ಪರಿಹಾರವನ್ನು ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಲೂಕಿನ ಅಭಿವೃದ್ಧಿ ಮಾಡಿ ತೋರಿಸುವ ವ್ಯಕ್ತಿ ನಾನು: ಶಾಸಕ ಹೆಚ್.ಕೆ.ಸುರೇಶ್

ಪಾರ್ಟಿ ಮುಗಿಸಿ, ಕಾರಿನಲ್ಲಿ ಮಲಗಿದ್ದ ಯುವಕನ ಅನುಮಾನಾಸ್ಪದ ಸಾವು..

ಮೂಲಭೂತ ಸೌಕರ್ಯಕ್ಕೆ ಆಗ್ರಹ: ಗ್ರಾಮ ಪಂಚಾಯಿತಿ ಸಿಬ್ಬಂದಿ ಕೂಡಿ ಹಾಕಿದ ಗ್ರಾಮಸ್ಥರು…

About The Author