Hubli News: ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ಲ ಗ್ರಾಮದಲ್ಲಿ ಸಿಲೆಂಡರ ಸೋರಿಕೆಯಾಗಿ ತೀವ್ರವಾಗಿ ಗಾಯಗೊಂಡಿದ್ದ ಒಂಬತ್ತು ಮಾಲಾದಾರಿಗಳಲ್ಲಿ ಇಬ್ಬರು ಚಿಕಿತ್ಸೆ ಫಲಿಸದೆ ನಿನ್ನೆ ಸಾವನ್ನಪ್ಪಿದ್ದರು. ಇಂದು ಮತ್ತೊಬ್ಬ ಮಾಲಾದಾರಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಮೂರಕ್ಕೇರಿದಂತಾಗಿದೆ.
ಕಳೆದ ನಾಲ್ಕು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೆ ರಾಜೂ (21) ಮಾಲಾಧಾರಿ ಕೊನೆಯುಸಿರೆಳೆದಿದ್ದಾನೆ. ನಿನ್ನೆ ನಿಜಲಿಂಗಪ್ಪ ಬೇಪುರಿ(58), ಸಂಜಯ ಸವದತ್ತಿ (18) ಮೃತರಾಗಿದ್ದರು. ಇನ್ನುಳಿದ ಅಯ್ಯಪ್ಪ ಮಾಲಾಧಿಗಾರಿಗಳಿಗೆ ಚಿಕಿತ್ಸೆ ಮುಂದುವರಿದಿದೆ.
ಮಾಲಾಧಿಗಾರಿಗಳ ಜೀವ ಉಳಿಸಿಕೊಳ್ಳಲು ನಾನಾ ರೀತಿಯ ಕಸರತ್ತು ಮಾಡಿದ್ದ ಕಿಮ್ಸ್ ಆಸ್ಪತ್ರೆಯ ಸಿಬ್ಬಂದಿಗಳು ಪ್ರಯತ್ನ ಪಟ್ಟಿದ್ದರು ಅಲ್ಲದೇ ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಬೆಂಗಳೂರಿನಿಂದ ತಜ್ಞ ವೈದ್ಯರನ್ನ ಸಚಿವ ಸಂತೋಷ ಲಾಡ್ ಮತ್ತು ಸರ್ಕಾರ ಪ್ರಯತ್ನ ಪಟ್ಟಿತ್ತು ಆದ್ರೆ ದುರಾದೃಷ್ಟವಶಾತ್ ಬದುಕುಳಿಯಲಿಲ್ಲ ಆ ಮಾಲಾಧಿಗಾರಿಗಳು.




