Sunday, September 8, 2024

Latest Posts

ಬರ್ತ್‌ಡೇ ಸೆಲೆಬ್ರೇಶನ್ ಬಗ್ಗೆ ಡಿ ಬಾಸ್ ಏನ್ ಹೇಳಿದ್ರು..?

- Advertisement -

ಇದೇ ಫೆಬ್ರವರಿ 16 ಡಿ ಬಾಸ್ ದರ್ಶನ್ ಬರ್ತ್‌ಡೇ ಇದೆ. ಬಾಸ್ ಬರ್ತ್‌ಡೇ ಹತ್ತಿರ ಬರುತ್ತಿದೆ ಎಂದು ದರ್ಶನ್ ಅಭಿಮಾನಿಗಳೆಲ್ಲ ಕಾತುರದಿಂದ ಕಾದು ಕುಳಿತಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮೊದಲಿನ ಹಾಗೆ ದರ್ಶನ್ ತಮ್ಮ ಬರ್ತ್‌ಡೇ ಆಚರಿಸಿಕೊಳ್ಳಲಿಲ್ಲ. ಮನೆ ಬಳಿ ಅಭಿಮಾನಿಗಳ ಸಾಲು ಹರಿದು ಬರೋದೆಲ್ಲ ಬೇಡ, ಅದರ ಬದಲು ಬಡವರಿಗೆ ಅಕ್ಕಿ ಬೇಳೆ ಹಂಚಿ. ಹಾಗೆ ಮಾಡಿದ್ರೆ ನನಗೂ ಖುಷಿಯಾಗತ್ತೆ ಅಂತಾ ಹೇಳಿದ್ರು. ಹಾಗಾಗಿ ಈ ವರ್ಷಾನಾದ್ರೂ ದಚ್ಚು ಬರ್ತ್‌ಡೇ ಸೆಲೆಬ್ರೇಟ್ ಮಾಡ್ಬೇಕು ಅಂತಾ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಹಾಗಾಗಿ ಇಂದು ದರ್ಶನ್ ವೀಡಿಯೋ ಮಾಡುವ ಮೂಲಕ, ಬರ್ತ್‌ಡೇ ಬಗ್ಗೆ ಹೇಳಿದ್ದಾರೆ.

ಬರ್ತ್‌ಡೇ ಸೆಲೆಬ್ರೇಷನ್ ಬಗ್ಗೆ ವೀಡಿಯೋ ಮಾಡಿರುವ ದಚ್ಚು, ನನ್ನ ಬರ್ತ್‌ಡೇ ನಾ ನೀವು ನಿಮ್ಮ ಬರ್ತ್‌ಡೇ ಥರಾ ಸೆಲೆಬ್ರೇಟ್ ಮಾಡ್ತೀರಾ. ಆದ್ರೆ ಈ ಬಾರಿಯೂ ನಾನು ಬೆಂಗಳೂರಿನಲ್ಲಿರೋದಿಲ್ಲಾ. ಕಳೆದ ವರ್ಷ ನಡೆದ ಘಟನೆಯಿಂದ ನನಗೆ ಬೇಸರವಾಗಿದೆ. ಅಪ್ಪು ನಮ್ಮನ್ನೆಲ್ಲ ಅಗಲಿ ಹೋದ್ರು. ಇಂಥ ಸಂದರ್ಭದಲ್ಲಿ ಬರ್ತ್‌ಡೇ ಸೆಲೆಬ್ರೇಷನ್ ಮಾಡಲು, ವೈಯಕ್ತಿಕವಾಗಿ ನನಗೆ ಇಷ್ಟವಿಲ್ಲದ ಕಾರಣ ನಾನು ಈ ಬಾರಿ ಹುಟ್ಟು ಹಬ್ಬವನ್ನ ಆಚರಿಸಿಕೊಳ್ಳುತ್ತಿಲ್ಲ. ನೀವು ದೂರದ ಊರಿಂದ ಬರುತ್ತೀರಾ. ಹಾಗಾಗಿ ಬಂದು ನಿರಾಶರಾಗಬಾರದು ಅನ್ನೋ ಕಾರಣಕ್ಕೆ ನಾನು ಮೊದಲೇ ಈ ಬಗ್ಗೆ ನಿಮಗೆ ಹೇಳ್ತಾ ಇದ್ದೇನೆ.

ಇನ್ನು ಫೆ.18 ರಂದು ನಿಮ್ಮ ಸ್ಥಳೀಯ ಚಿತ್ರಂದಿರದಲ್ಲಿ ಮೆಜೆಸ್ಟಿಕ್ ಚಿತ್ರ ರಿ ರಿಲೀಸ್ ಆಗುತ್ತಿದೆ. ಎಲ್ಲರೂ ಹೋಗಿ ನೋಡಿ ಎಂದಿದ್ದಾರೆ. ಇನ್ನು ಡಿ ಬಾಸ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಈ ರೀತಿ ಬರೆದು ಕೊಂಡಿದ್ದಾರೆ..

ಪ್ರೀತಿಯ ಅಭಿಮಾನಿಗಳಲ್ಲಿ ನಿಮ್ಮ ದಾಸ ದರ್ಶನ್ ತೂಗುದೀಪ ಮಾಡುವ ವಿನಂತಿ.
2021ರ ಕರಾಳ ದಿನಗಳು ಮತ್ತೆ ಮರುಕಳಿಸದಿರಲಿ, ಕೋವಿಡ್ ಇಂದ ಸಂಪೂರ್ಣವಾಗಿ ನಮ್ಮ ಜನತೆ ಚೇತರಿಸಿಕೊಳ್ಳಲಿ ಎಂಬ ಕಾರಣದಿಂದ ನನ್ನ ಹುಟ್ಟುಹಬ್ಬವನ್ನು ಈ ಬಾರಿಯೂ ಸಹ ಸರಳವಾಗಿರಲೆಂದು ನಿರ್ಧರಿಸಿದ್ದೇನೆ. ಈ ಬಾರಿಯೂ ಬೆಂಗಳೂರಿನಲ್ಲಿ ನಾನು ಈ ಸಮಯದಲ್ಲಿರುವುದಿಲ್ಲ. ಬಹಳಷ್ಟು ದೂರದಿಂದ ಮನೆಯ ಹತ್ತಿರ ಬಂದು ನಿರಾಶರಾಗದಿರಿ. ನಿಮ್ಮೆಲ್ಲರನ್ನು ನೋಡಿ ಮುಖಾಮುಖಿಯಾಗುವ ಹಂಬಲವೂ ನನಗೂ ಸಾಕಷ್ಟಿದೆ. ಇವೆಲ್ಲದಕ್ಕೂ ಸದ್ಯದ ಪರಿಸ್ಥಿತಿ ಸೂಕ್ತವಲ್ಲವೆಂಬುದು ನನ್ನ ಭಾವನೆ. ಆದಷ್ಟು ಬೇಗ ನಿಮ್ಮೆಲ್ಲರನ್ನು ಭೇಟಿ ಮಾಡುವೆ ಎಂದು ನಂಬಿದ್ದೇನೆ.
ನನ್ನ ಬಗ್ಗೆ ಇಷ್ಟೆಲ್ಲಾ ಪ್ರೀತಿ ಅಭಿಮಾನ ಇಟ್ಟಿರುವ ನೀವು ನನ್ನ ಈ ಕೋರಿಕೆಯನ್ನು ನಡೆಸಿಕೊಡುವಿರಿ ಎಂದು ನಂಬಿರುತ್ತೇನೆ.

ಇಂತಿ ನಿಮ್ಮ ಪ್ರೀತಿಯ
ದಾಸ ದರ್ಶನ್

https://www.instagram.com/p/CZ3rGogtiGH/

- Advertisement -

Latest Posts

Don't Miss