ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿ ಚಿತ್ರರಂಗದಲ್ಲಿ 20 ವರ್ಷ ಪೂರೈಸಿರೋ ಸಂಭ್ರಮವನ್ನು ಮೆಜೆಸ್ಟಿಕ್ ಚಿತ್ರತಂಡ ಅಚರಿಸಿದೆ. ಅಷ್ಟು ಮಾತ್ರ ಅಲ್ಲ ಚಿತ್ರವನ್ನು ರೀರಿಲೀಸ್ ಮಾಡ್ತಿರೋ ಸಿಹಿಸುದ್ದಿ ಕೊಟ್ಟಿದ್ದಾರೆ ಡಿಬಾಸ್. ಪಿ ಎನ್ ಸತ್ಯ ನಿರ್ದೇಶನದ ಎಂ.ಜಿ ರಾಮಮೂರ್ತಿ ನಿರ್ಮಾಣದ ಮೆಜೆಸ್ಟಿಕ್ ದರ್ಶನ್ ಅನ್ನೋ ನಟನನ್ನು ಕರ್ನಾಟಕಕ್ಕೆ ಪರಿಚಯಿಸಿದ ಚಿತ್ರ. ಇವತ್ತು ದರ್ಶನ್ ಚಾಲೆಂಜಿಂಗ್ ಸ್ಟಾರ್ ಸೂಪರ್‌ಸ್ಟಾರ್ ಆಗಿ ಬೆಳೆದಿದ್ದಾರೆ. ಆದರೆ ಈ ಅವರ ಬೆಳವಣಿಗೆಯ ಬೇರು ಅಂದ್ರೆ ಅದು ಮೆಜೆಸ್ಟಿಕ್.
ಈ ಸಂಭ್ರಮಕ್ಕೆ ಎರಡು ದಶಕಗಳು ತುಂಬಿದ್ದನ್ನು ಚಿತ್ರತಂಡ ಸೇರಿ ಸಂಭ್ರಮಿಸಿತು.
ದರ್ಶನ್‌ಗೆ ಜೋಡಿಯಾಗಿದ್ದ ನಟಿ ರೇಖಾ ಮತ್ತು ಜೊತೆಯಾಗಿ ನಟಿಸಿದ್ದ ವನಿತಾವಾಸು, ರಮೇಶ್ ಪಂಡಿತ್, ಉಮೇಶ್ ಪುಂಗ ಸೇರಿದಂತೆ ಸಂಪೂರ್ಣ ತಾರಾಬಳಗವೇ ಹಾಜರಿತ್ತು. ಆದರೆ ನಿರ್ದೇಶಕ ಪಿ ಎನ್ ಸತ್ಯ ಅಕಾಲಿಕ ಮರಣಹೊಂದಿದ್ದು ಅವರ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ಸ್ವತಃ ದರ್ಶನ್ ವೇದಿಕೆಯಲ್ಲಿ 20 ವರ್ಷಗಳ ಸಂಭ್ರಮ ಹಂಚಿಕೊಂಡು, ತಮ್ಮ ಮೊದಲ ಸಿನಿಮಾದಲ್ಲಿ ಜೊತೆಗಿದ್ದವರನ್ನು ಸ್ಮರಿಸಿದರು.
ಸದ್ಯ ಕ್ರಾಂತಿ ಸಿನಿಮಾ ಬಿಡುಗಡೆಯವರೆಗೂ ಅಭಿಮಾನಿಗಳಿಗೆ ಯಾವ ಸಿನಿಮಾ ಕೂಡ ಇಲ್ಲ. ಫೆಬ್ರವರಿ 18ಕ್ಕೆ ಮೆಜೆಸ್ಟಿಕ್ ರೀರಿಲೀಸ್ ಆಗ್ತಿರೋದು ಡಿಬಾಸ್ ಅಭಿಮಾನಿಗಳಿಗೆ ಹಬ್ಬವಾಗಲಿದೆ. ಚಿತ್ರರಂಗದಲ್ಲಿ ತನ್ನನ್ನು ಬೆಳೆಸಿದವರನ್ನು ಸದಾ ಸ್ಮರಿಸೋ ಚಾಲೆಂಜಿಂಗ್ ಸ್ಟಾರ್ 2 ದಶಕದ ಸಂಭ್ರಮಕ್ಕೆ ವಾಣಿಜ್ಯ ಮಂಡಳಿ ಸೇರಿದಂತೆ ಚಿತ್ರರಂಗದ ದೊಡ್ಡ ಬಳಗವೇ ಸಾಥ್ ಕೊಟ್ಟಿತ್ತು.
ಡಿ ಬಾಸ್ ಸ್ಯಾಂಡಲ್‌ವುಡ್ ಎಂಟ್ರಿಗೆ 20ರ ಸಂಭ್ರಮ
- Advertisement -
- Advertisement -