ಡಿಕೆಶಿ ಮನೆ ಮತ್ತು ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಾನು, ನನ್ನ ಕುಟುಂಬದ ಕಡೆಯಿಂದ ನಿಮಗೆಲ್ಲರಿಗೂ ನಮಸ್ಕಾರ. ಬೆಳಿಗ್ಗೆಯಿಂದ ಮನೆ ಮುಂದೆ, ಬೇರೆ ಕಡೆ ಎಲ್ಲ ನನ್ನ ಸಲುವಾಗಿ ನನ್ನ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನನ್ನ ಹೋರಾಟಕ್ಕೆ ಸಾಥ್ ಕೊಟ್ಟಿದ್ದಾರೆ. ನಿಮಗೆಲ್ಲರಿಗೂ ಧನ್ಯವಾದ ಎಂದಿದ್ದಾರೆ.
ಈ ಚುನಾವಣೆ ಮುಗಿಯುವವರೆಗೂ ರೇಡ್ ಹೀಗೆ ಮುಂದುವರಿಯುತ್ತದೆ. ಈಡೀ ದೇಶದ ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ. 30 ವರ್ಷದ ರಾಜಕಾರಣದಲ್ಲಿ ನಾನು ಯಾವುದೇ ತಪ್ಪನ್ನು ಮಾಡಿಲ್ಲ. ನಾನು, ನಮ್ಮ ಕುಟುಂಬ ಕಳಂಕ ತರುವ ಕೆಲಸ ಮಾಡಿಲ್ಲ. ದಾಳಿ ಮಾಡಿದವರು, ಪ್ಯಾಂಟ್, ಪಂಚೆ, ಸೀರೆಯ ಲೆಕ್ಕ ತೆಗೆದುಕೊಂಡಿದ್ದಾರೆ.
ಈ ಡಿ.ಕೆ.ಶಿವಕುಮಾರ್ ಹೆದರುವಂಥ ಮಗ ಅಲ್ಲ. ಯಾವುದೇ ಒತ್ತಡಕ್ಕೂ ಹೆದರುವ ಮಗ ಅಲ್ಲ ನಾನು. ನಾನುಂಟು ನೀವುಂಟು. ನಿಮ್ಮ ಪ್ರೀತಿ, ಭಾವನೆಗೆ ಬೆಲೆ ಕಟ್ಟಲಾಗುವುದಿಲ್ಲ. ಈ ಉಪಚುನಾವಣೆಯಲ್ಲಿ ಈ ದಾಳಿಗೆ ನೀವು ಉತ್ತರ ಕೊಡಬೇಕು ಎಂದು ಡಿಕೆಶಿ ಕರೆ ನೀಡಿದ್ದಾರೆ..