ಸಾಮಾನ್ಯವಾಗಿ ಸಿನಿಮಾ ನಟ ನಟಿಯರ ದಿನಚರಿ ಹೇಗಿರತ್ತೆ ಅಂತಾ ತಿಳಿದುಕೊಳ್ಳುವ ಕುತೂಹಲ ಎಲ್ಲರಲ್ಲೂ ಇರತ್ತೆ. ಅದೇ ರೀತಿ ರಾಜಕಾರಣಿಗಳ ದಿನಚರಿ ಕೂಡ ವಿಭಿನ್ನವಾಗಿರತ್ತೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ 91.1 ಎಫ್ಎಂ ಜೊತೆ ಮಾತನಾಡಿದ್ದು, ತಮ್ಮ ಜೀವನದ ಬಗ್ಗೆ ಹೇಳಿದ್ದಾರೆ.
ನೀವು ಎಷ್ಟು ಗಂಟೆಗೆ ಏಳ್ತೀರಿ, ನಿಮ್ಮ ದಿನಚರಿ ಹೇಗಿರತ್ತೆ ಅಂತಾ ಕೇಳಿದಾಗ, ಅದಕ್ಕೆ ಉತ್ತರಿಸಿದ ಡಿಕೆಶಿ, ನಾನು ಬೆಳಿಗ್ಗೆ 7 ಅಥವಾ 7.30ಕ್ಕೆ ಏಳುತ್ತೇನೆ. ನ್ಯೂಸ್ ಪೇಪರ್ ಓದುತ್ತೇನೆ. ನಂತರ ಫ್ರೆಶಪ್ ಆಗಿ, ತಿಂಡಿ ತಿನ್ನುತ್ತೇನೆ. ಆಮೇಲೆ ಕೆಲಸ ಆರಂಭವಾಗುತ್ತದೆ. ಇದರ ಮಧ್ಯೆ ಸಮಯ ಸಿಕ್ಕರೆ, ಯೋಗ ಮಾಡುತ್ತೇನೆ. ನಾನು ಯಾವಾಗಲೂ ರಾತ್ರಿ ಮಲಗೋದೇ 1 ಗಂಟೆಯಾಗತ್ತೆ. ಇತ್ತೀಚೆಗಂತೂ ರಾತ್ರಿ 3 ಗಂಟೆಯ ತನ ಬ್ಯುಸಿಯಾಗಿರುತ್ತೇನೆ. ನನ್ನ ಪತ್ನಿ, ಮಕ್ಕಳೊಂದಿಗೆ ಹರಟೆ ಹೊಡೆದು ತುಂಬಾ ದಿನಗಳೇ ಆಗಿದೆ. ನಾನು ಅವರಿಗೂ ಸಮಯ ಕೊಡಲಾಗುತ್ತಿಲ್ಲ ಎಂದು ಹೇಳಿದ್ದಾರೆ.
ರಾಜಕಾರಣಿಗಳ ಬದುಕು ಖುಷಿ-ಖುಷಿಯಾಗಿರುತ್ತದೆ ಎಂದು ನೀವು ಅಂದುಕೊಂಡಿರಬಹುದು. ಆದರೆ ನನ್ನ ದಿನಚರಿಯನ್ನು ನೋಡಿದ್ರೆ ಖಂಡಿತ ನಿಮಗೆ ಅಚ್ಚರಿಯಾಗಬಹುದು. ರೇಡಿಯೋ ಸಿಟಿ ಎಫ್ಎಂ ನಡೆಸಿದ ನೋ ಪಾಲಿಟಿಕ್ಸ್ ಪ್ಲೀಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ ಎಂದು ತಾವೇನು ಮಾತನಾಡಿದ್ದಾರೆ ಎಂಬುದನ್ನ ಡಿಕೆಶಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಹಾಗಾದ್ರೆ ಅವರೇನೇನು ಮಾತನಾಡಿದ್ದಾರೆಂದು ನೀವೇ ನೋಡಿ..
ರಾಜಕಾರಣಿಗಳ ಬದುಕು ಖುಷಿ-ಖುಷಿಯಾಗಿರುತ್ತದೆ ಎಂದು ನೀವು ಅಂದುಕೊಂಡಿರಬಹುದು. ಆದರೆ ನನ್ನ ದಿನಚರಿಯನ್ನು ನೋಡಿದ್ರೆ ಖಂಡಿತ ನಿಮಗೆ ಅಚ್ಚರಿಯಾಗಬಹುದು.
ರೇಡಿಯೋ ಸಿಟಿ ಎಫ್ಎಂ ನಡೆಸಿದ ನೋ ಪಾಲಿಟಿಕ್ಸ್ ಪ್ಲೀಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ವಿವರವಾಗಿ ಮಾತನಾಡಿದ್ದೇನೆ. pic.twitter.com/uosccSDQjp— DK Shivakumar (@DKShivakumar) April 25, 2023
‘ಶಾಸಕರಿಗೂ ವಯಸ್ಸಾಗಿದ್ದು ವಿಶ್ರಾಂತಿಯ ಅಗತ್ಯವಿದೆ, ಹಾಗಾಗಿ ಬಿಜೆಪಿಗೆ ಓಟ್ ಹಾಕಿ’
ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ತಿಳಿಸುತ್ತಾ ಕ್ಯಾಂಪೇನ್ ಮಾಡಿದ ಮೋಹನ್ ಬಾಬು..