ಬೆಂಗಳೂರು: ನಗರದ ಪ್ರೆಸ್ ಕ್ಲಬ್ (press club) ಗೆ ಬಂದ ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ (Venkat) ಇಂದು ದಿಢೀರ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಹಳ ದಿನಗಳ ನಂತರ ಮಾಧ್ಯಮಗಳ ಮುಂದೆ ಬಂದ ನಟ ಹುಚ್ಚ ವೆಂಕಟ್, ಇಷ್ಟು ದಿನ ಏನ್ಮಾಡ್ತಿದ್ದೆ, ಮುಂದೇನ್ ಮಾಡ್ತೀನಿ ಎಂಬುದರ ಬಗ್ಗೆ ವಿವರಿಸಿದ್ದಾರೆ.
ಇವರ ಮಾತುಗಳನ್ನ ಕೇಳಿ ವೆಂಕಟ್ ಸಂಪೂರ್ಣ ಬದಲಾಗಿದ್ದಾರೆ. ನನ್ ಮಗಂದ್ ನನ್ ಎಕಡ ಎನ್ನುತ್ತಿದ್ದ ಫೈರಿಂಗ್ ಸ್ಟಾರ್ ಈಗ ಕೂಲ್ ಸ್ಟಾರ್ ಆಗಿದ್ದಾರೆ ಅನ್ನಿಸಿದ್ದಂತೂ ಸುಳ್ಳಲ್ಲ.
‘ತಿಕ್ಲಾ ಹುಚ್ಚಾ ವೆಂಕಟ್’ ಸಿನಿಮಾ ಮಾಡ್ತೀನಿ. ನನ್ನ ಬ್ಯಾನರ್ನಲ್ಲೇ ಈ ಸಿನಿಮಾ ಮಾಡುತ್ತಿದ್ದೇನೆ. ಪ್ರಿಪ್ರೊಡಕ್ಷನ್ ಹಂತದಲ್ಲಿದೆ. ನಿಮ್ಮೆಲ್ಲರ ಸಹಕಾರ ಇರಲಿ. ನಾನು ಬದಲಾವಣೆ ಮಾಡಿಕೊಂಡಿದ್ದೇನೆ, ಮಗು ಥರ ಇರಬೇಕು ಅಂದುಕೊಂಡಿದ್ದೇನೆ. ಎಲ್ಲರೂ ಪ್ರೀತಿಸ್ತಾರೆ ಅಲ್ಲವಾ.. ಅದಕ್ಕೆ ಇನ್ಮೇಲೆ ಸಾಫ್ಟ್ ಆಗಿರಬೇಕು ಅಂದುಕೊಂಡಿದ್ದೇನೆ. ಹೀಗಾಗಿ ಅರಚಾಡೋದು, ಕಿರಚಾಡೋದು ಮಾಡಲ್ಲ ಎಂದರು.
ಶಾರ್ಟ್ ಫಿಲಂಗಳಲ್ಲಿ ಗೆಸ್ಟ್ ರೋಲ್ ಮಾಡಲು ಅವಕಾಶ ಬರ್ತಿದೆ. ನನಗೆ ದುಡ್ಡು ಮುಖ್ಯ ಅಲ್ಲ, ಸಿನಿಮಾ ಮುಖ್ಯ. ಸಂಭಾವನೆ ನಿರೀಕ್ಷೆ ಮಾಡದೇ ಕೆಲಸ ಮಾಡ್ತೀನಿ. ಲಾಕ್ಡೌನ್ನಲ್ಲಿ ಅಪ್ಪನನ್ನು ಕಳೆದುಕೊಂಡೆ. ನನ್ನನ್ನು ಅರ್ಥ ಮಾಡಿಕೊಳ್ಳುವವಳು ನನ್ನ ಜೀವನದಲ್ಲಿ ಬಂದಳು. ಆದರೆ ಮಿಸ್ ಅಂಡರ್ ಸ್ಟ್ಯಾಂಡಿಂಗ್ನಿಂದ ದೂರ ಹೋದಳು. ನಮ್ಮ ಅಪ್ಪನಿಗೆ ನಾನು ಸಿನಿಮಾ ಮಾಡಬೇಕು ಎನ್ನುವುದು ಕನಸು. ಅಪ್ಪನ ಕನಸು ಈಡೇರಿಸ್ತೇನೆ. ಒಂದಷ್ಟು ದುಡ್ಡು ಕೊಟ್ಟು ಹೋಗಿದ್ದಾರೆ. ಅದರಲ್ಲೇ ಸಿನಿಮಾ ಮಾಡ್ತೀನಿ ಎನ್ನುತ್ತಲೇ ಭಾವುಕರಾದ ವೆಂಕಟ್, ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ, ಆಶೀರ್ವಾದ ಇರಲಿ ಎಂದು ಕೋರಿದವರು.