Friday, April 18, 2025

Latest Posts

ಡಾನ್ಸ್ ಫ್ಲೋರ್ ಕುಸಿದು, ವಧು ವರ ಸೇರಿ 37 ಮಂದಿ ಆಸ್ಪತ್ರೆಗೆ ದಾಖಲು

- Advertisement -

International News: ಮದುವೆ ಮನೆ ಅಂದ್ರೆ ಅಲ್ಲಿ ಸಂಭ್ರಮ ಸಡಗರ ಇದ್ದೇ ಇರುತ್ತದೆ. ಆದರೆ ಅದಕ್ಕು ಮುನ್ನ ಎಚ್ಚರಿಕೆ ವಹಿಸದಿದ್ದಲ್ಲಿ, ಅಲ್ಲಿ ಸಂಭ್ರಮದ ಬದಲು ಎಡವಟ್ಟೇ ಆಗಿ ಹೋಗುತ್ತದೆ. ಅಂಥದ್ದೇ ಒಂದು ಘಟನೆ ಇಟಲಿಯಲ್ಲಿ ನಡೆದಿದೆ.

ಇಟಲಿಯಲ್ಲಿ ಪಾವೋಲೋ ಮತ್ತು ವಲೇರಿಯಾ ಎಂಬ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಭ್ರಮದಲ್ಲಿದ್ದರು. ಹಾಗಾಗಿ ನೃತ್ಯ ಸಮಾರಂಭವನ್ನು ಏರ್ಪಡಿಸಿದ್ದರು. ಆದರೆ ಅವರು ಡಾನ್ಸ್ ಮಾಡುತ್ತಿದ್ದ ನೆಲ ಟೊಳ್ಳಾದ ಕಾರಣ, ಭಾರ ಬಿದ್ದು ನೆಲ ಕುಸಿದಿದೆ. ದಂಪತಿ ಸೇರಿ ಡಾನ್ಸ್‌ ಮಾಡುತ್ತಿದ್ದ 37 ಮಂದಿ 25 ಅಡಿ ಎತ್ತರದಿಂದ ಬಿದ್ದಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇವರ ಮದುವೆ ಸಮಾರಂಭ ಇಟಲಿ ಹಾಲ್‌ವೊಂದರಲ್ಲಿ ನಡೆಯುತ್ತಿತ್ತು. ಅಲ್ಲೇ ನೃತ್ಯ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಈ ಘಟನೆ ಸಂಭವಿಸಿದೆ. ಹಾಲ್ ವಿರುದ್ಧ ದೂರು ದಾಖಲಾಗಿದೆ. ವಧು ವರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಫೋಟೋ ವೈರಲ್ ಆಗಿದ್ದು, ಇಬ್ಬರೂ ಡ್ರಿಪ್ಸ್ ಹಾಕಿ ಮಲಗಿದ್ದಾರೆ.

ಮೆಕ್ಸಿಕೋದಲ್ಲಿ ಮೊದಲ ರಾಮಮಂದಿರ ಉದ್ಘಾಟನೆ, ಶ್ರೀರಾಮನ ಪ್ರಾಣಪ್ರತಿಷ್ಠಾಪನೆ

ರನ್‌ವೇನಲ್ಲಿ ಸ್ಕಿಡ್ ಆದ ಮಯನ್ಮಾರ್‌ ಮಿಲಿಟರಿ ವಿಮಾನ: 6 ಮಂದಿಗೆ ಗಾಯ

ಅಮೆರಿಕದ ಚಿಕಾಗೋದಲ್ಲಿ ಗುಂಡಿನ ದಾಳಿ: 8 ಮಂದಿ ಸಾವು

- Advertisement -

Latest Posts

Don't Miss