Dandeli News: ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಬೊಮ್ಮನಳ್ಳಿ ಬಳಿ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿದೆ. ದಟ್ಟ ಅರಣ್ಯ ಪ್ರದೇಶದಿಂದ ಈ ಕರಡಿ ರಸ್ತೆಗೆ ಪ್ರವೇಶಿಸಿದ್ದು, ವಾಹನ ಸವಾರರು ಕೆಲ ಕಾಲ ಆತಂಕಕ್ಕೀಡಾಗಿದ್ದರು.
ಭಾಗವತಿ-ಬೊಮ್ಮನಳ್ಳಿ ರಸ್ತೆಯಲ್ಲಿ ಕರಡಿ ಸಂಚರಿಸುವ ದೃಶ್ಯ ಕಂಡುಬಂದಿದ್ದು, ಈ ರಸ್ತೆಯಲ್ಲಿ ಪ್ರತಿದಿನ ಹಲವರು ಓಡಾಡುತ್ತಿರುತ್ತಾರೆ. ಆದರೆ ನಿನ್ನೆ ಈ ರಸ್ತೆಯಲ್ಲಿ ಓಡಾಡುವವರಿಗೆ ಕರಡಿ ಸಿಕ್ಕಿದ್ದು, ಈ ರಸ್ತೆಯಲ್ಲಿ ಓಡಾಡಲು ಜನ ಹಿಂಜರಿಯುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ರಸ್ತೆಯಲ್ಲಿ ಆನೆ ಮತ್ತು ಕರಡಿಗಳ ಓಡಾಟ ಹೆಚ್ಚಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಅಲ್ಲೇ ಇದ್ದ ಹಲವರು ಈ ದೃಶ್ಯವನ್ನು ತಮ್ಮ ಸೆಲ್ಫೋನ್ನಲ್ಲಿ ಸೆರೆಹಿಡಿದಿದ್ದಾರೆ.




