ಚಾಲೆAಜಿAಗ್‌ಸ್ಟಾರ್ ದರ್ಶನ್ ಆಗಿನ್ನೂ ಸ್ಯಾಂಡಲ್‌ವುಡ್‌ಗೆ ಸಣ್ಣ ಸಣ್ಣ ಪಾತ್ರಗಳ ಮೂಲಕ ಅಷ್ಟೇ ಎಂಟ್ರಿಕೊಟ್ಟಿದ್ರು. ಇನ್ನೂ ಚಾಲೆಂಜಿAಗ್‌ಸ್ಟಾರ್ ಆಗಿರಲಿಲ್ಲ. ಆದರೆ ಪ್ರೀತಿ ಹುಟ್ಟಿತ್ತು.
ಸಿನಿಮಾದಲ್ಲಿ ಪ್ರೀತಿ ಮಾಡೋ ಮೊದಲೇ ಜೀವನದಲ್ಲಿ ಪ್ರೀತಿ ಮಾಡಿದ್ರು. ಪ್ರೀತಿಸಿದ ವಿಜಯಲಕ್ಷಿö್ಮಯವರನ್ನೇ ಮದುವೆಯೂ ಆದ್ರು.
ಹಾಗೆ ನೋಡಿದ್ರೆ ದರ್ಶನ್ ಅವ್ರ ಮದ್ವೆ ಅದ್ಧೂರಿಯಾಗೇನೂ ನಡೆದಿರಲ್ಲ. ಧರ್ಮಸ್ಥಳದಲ್ಲಿ ಸಿಂಪಲ್ಲಾಗಿ ನಡೆದಿತ್ತು. ೨೦೦೦ನೇ ಇಸವಿಯಲ್ಲಿ ನಡೆದ ಮದುವೆಗೆ ದರ್ಶನ್ ಸ್ನೇಹಿತರು ಸಂಬAಧಿಗಳು ಮಾತ್ರ ಬಂದಿದ್ರು. ಚಿತ್ರರಂಗದ ಆಪ್ತರು ಮಾತ್ರ ಮದುವೆಯಲ್ಲಿದ್ರು. ದರ್ಶನ್ ತಂದೆ ತೂಗುದೀಪ ಶ್ರೀನಿವಾಸ್ ತೀರಿಕೊಂಡು ಐದು ವರ್ಷಗಳಾಗಿತ್ತು. ತಾಯಿ ಮೀನಾ ತೂಗುದೀಪ್ ಮತ್ತು ದಿನಕರ್ ದರ್ಶನ್ ಮದುವೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ರು.
ದರ್ಶನ್-ವಿಜಯಲಕ್ಷಿö್ಮಗೆ ಪುತ್ರ ವಿನೀತ್ ಕೆಲವು ವರ್ಷಗಳ ಹಿಂದೆ ಬಂದ ಐರಾವತ ಚಿತ್ರದಲ್ಲಿ ತಂದೆಯ ಜೊತೆ ನಟಿಸಿದ್ದರು. ಸ್ವಲ್ಪ ಕೌಟುಂಬಿಕ ಏರು-ಪೇರುಗಳನ್ನು ಕಂಡರೂ ದರ್ಶನ್ ವಿಜಯಲಕ್ಷಿö್ಮ ದಂಪತಿ ಮತ್ತೆ ಒಂದಾಗಿ ಸಮಾಜಕ್ಕೆ ಮಾದರಿಯಾಗಿ ಸಾಗಿದ್ದಾರೆ. ಪ್ರತೀ ವರ್ಷ ದರ್ಶನ್ ಬರ್ತ್ಡೇಯಲ್ಲೂ ಪ್ರೀತಿಯಿಂದ ದರ್ಶನ್‌ಗೆ ಗಿಫ್ಟ್ ಕೊಡೋ ಪತ್ನಿ ವಿಜಯಲಕ್ಷಿö್ಮಗೆ ಈ ವರ್ಷ ೨೨ನೇ ವರ್ಷದ ಮ್ಯಾರೇಜ್ ಆನಿವರ್ಸರಿ ಖುಷಿಯಲ್ಲಿ ದರ್ಶನ್ ಪತ್ನಿಗೇನಾದ್ರೂ ಗಿಫ್ಟ್ ಕೊಟ್ಟಿದ್ದಾರಾ..? ಸುದ್ದಿ ಇನ್ನಷ್ಟೇ ಬರಬೇಕು.
ದರ್ಶನ್ ಪ್ರೇಮ ವಿವಾಹಕ್ಕೆ ೨೨ ವರ್ಷದ ಸಂಭ್ರಮ
- Advertisement -
- Advertisement -