Horoscope: ಕೆಲವು ರಾಶಿಯ ಹೆಣ್ಣು ಮಕ್ಕಳ ಗುಣವೇ ಹಾಗೆ. ಅವರಿಗೆ ಹುಟ್ಟು ಶ್ರೀಮಂತಿಕೆ ಇಲ್ಲದಿದ್ದರೂ, ಅವರು ಮದುವೆಯಾದ ಬಳಿಕ, ಹೋದ ಮನೆಗೆ ಅದೃಷ್ಟ ತಂದು ಕೊಡುತ್ತಾರೆ. ಅಂಥ ರಾಶಿಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ಕಟಕ ರಾಶಿ: ಕಟಕ ರಾಶಿಯವರು ಸ್ವಾಭಿಮಾನಿಗಳಾಗಿರುತ್ತಾರೆ. ಹಾಗಾಗಿ ಇವರಿಗೆ ಇನ್ನೊಬ್ಬರ ಮುಂದೆ ಕೈ ಚಾಚುವ ಅಭ್ಯಾಸವಿರುವುದಿಲ್ಲ. ಇವರ ಕೆಲಸ ಇವರೇ ಮಾಡಿಕೊಳ್ಳಬೇಕು. ಇವರ ಖರ್ಚು ವೆಚ್ಚ ಇವರೇ ನೊಡಿಕೊಳ್ಳಬೇಕು. ಹೀಗೆ ಸ್ವಾಭಿಮಾನಿಗಳಾಗಿರುತ್ತಾರೆ. ಅಲ್ಲದೇ, ಇನ್ನೊಬ್ಬರಿಗೆ ಸಹಾಯ ಮಾಡುವ ಮನಸ್ಥಿತಿ ಇವರದ್ದಾಗಿರುತ್ತದೆ. ಇವರು ಪತಿಗೆ ಮತ್ತು ಪತಿಯ ಮನೆಯವರ ಕಷ್ಟದಲ್ಲಿ ಭಾಗಿಯಾಗಿ, ಕಷ್ಟ ನೀಗಿಸಲು ಮುಂದಾಾಗುತ್ತಾರೆ.
ತುಲಾ ರಾಶಿ: ತುಲಾರಾಶಿಯವರು ಫ್ರೆಂಡ್ಲಿ ನೇಚರ್ ಇರುವಂಥವರು. ಈ ರಾಶಿಯ ಹೆಣ್ಣು ಮಕ್ಕಳು ಕೂಡ, ಎದುರಿನವರ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಇವರು ಮಾತನಾಡುವ ರೀತಿ, ನಡೆದುಕೊಳ್ಳುವ ರೀತಿಯನ್ನು ಎಲ್ಲರೂ ಮೆಚ್ಚುತ್ತಾರೆ. ಹಾಗಾಗಿ ಇವರು ಕೂಡ ಪತಿಯ ಮನೆಯಲ್ಲಿ ಉತ್ತಮ ಜೀವನ ನಡೆಸುತ್ತಾರೆ.
ಮೀನ ರಾಶಿ: ಸೂಕ್ಷ್ಮ ರಾಶಿಯವರಾದ ಮೀನ ರಾಶಿಯವರು ಪತಿಯ ಜೊತೆ ಮತ್ತು ಪತಿಯ ಮನೆಯಲ್ಲಿ ಹೊಂದಿಕೊಂಡು ಜೀವನ ನಡೆಸುವವರಾಗಿರುತ್ತಾರೆ. ಹಾಗಾಗಿ ಈ ರಾಶಿಯವರು ತಾಳ್ಮೆಯಿಂದ ಮನೆ ನಡೆಸಿಕೊಂಡು ಹೋಗುತ್ತಾರೆ.
ವೃಷಭ ರಾಶಿ: ವೃಷಭ ರಾಶಿಯ ಹೆಣ್ಣು ಮಕ್ಕಳಿಗೆ ತಿಳುವಳಿಕೆ ಮತ್ತು ತಾಳ್ಮೆ ಎರಡೂ ಹೆಚ್ಚು. ಹಾಗಾಗಿ ಇವರು ಕೋಪಕ್ಕೆ ತಾಳ್ಮೆಗೆಡದೇ, ಮೌನವಾಗಿದ್ದು, ಬುದ್ಧಿವಂತಿಕೆಯಿಂದ ಜೀವನ ನಡೆಸುತ್ತಾರೆ. ತ್ಯಾಗದ ಸ್ವಭಾವವೂ ಇವರದ್ದಾಗಿರುವುದರಿಂದ, ಈ ರಾಶಿಯವರನ್ನು ವರಿಸಿದ ಪುರುಷರಿಗೆ ಜೀವನ ಉತ್ತಮವಾಗಿರುತ್ತದೆ.
ಪತ್ನಿಯಲ್ಲಿ ಇಂಥ ಗುಣವಿದ್ದರೆ, ಪತಿ ಶ್ರೀಮಂತನಾಗುವುದು ಗ್ಯಾರಂಟಿ ಅಂತಾರೆ ಚಾಣಕ್ಯರು