Political News: ಡಿಸಿಎಂ ಡಿ.ಕೆ.ಶಿವಕುಮಾರ್ ಕುಂಭ ಮೇಳಕ್ಕೆ ಪತ್ನಿ ಸಮೇತರಾಗಿ ಹೋಗಿ, ಪುಣ್ಯ ಸ್ನಾನ ಮಾಡಿ ಬಂದಿದ್ದಾರೆ. ಈ ಮೂಲಕ ಖರ್ಗೆಗೆ ಟಕ್ಕರ್ ಕೊಟ್ಟಿದ್ದಾರೆಂದು ಹಲವರು ಹೇಳುತ್ತಿದ್ದಾರೆ. ಆದರೆ ಡಿಕೆಶಿ ಈ ಮೊದಲೇ ಹೇಳಿಕೆಯೊಂದನ್ನು ಕೊಟ್ಟಿದ್ದರು. ಕುಂಭ ಮೇಳ ಬರೀ ಬಿಜೆಪಿಯವರಿಗಲ್ಲ, ನಾನೂ ಹೋಗಲಿದ್ದೇನೆ ಎಂದು. ಅದಾದ ಬಳಿಕ ಖರ್ಗೆ, ಬಿಜೆಪಿಗರನ್ನು ಕುರಿತು ಕುಂಭ ಮೇಳದಲ್ಲಿ ಸ್ನಾನ ಮಾಡಿದರೆ, ದೇಶದ ಬಡತನ ನಾಶವಾಗುತ್ತದೆಯೇ ಎಂದು ಕೇಳಿದ್ದರು.
ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯಾಗುವ ಮಾತು ಕೇಳಿ ಬರುತ್ತಿದೆ. ಡಿಕೆಶಿ ಸ್ಥಾನಕ್ಕೆ ಇನ್ನೊಬ್ಬರು ಬರೋ ಸೂಚನೆ ಸಿಕ್ಕಿದೆ. ಇದೇ ಸಮಯದಲ್ಲಿ ಡಿಕೆಶಿ ಟ್ವೀಟ್ ಒಂದನ್ನು ಮಾಡಿದ್ದು, ತಮ್ಮ ಗೆಲುವು ಗ್ಯಾರಂಟಿ ಅನ್ನೋ ರೀತಿ ಬರೆದಿದ್ದಾರೆ.
ಟಿ.ನರಸೀಪುರದಲ್ಲಿ ನಡೆದ ಕುಂಭ ಮೇಳದಲ್ಲೂ ಡಿಕೆಶಿ ಭಾಗಿಯಾಗಿದ್ದರು. ಇದೇ ವೀಡಿಯೋವನ್ನು ಅಪ್ಲೋಡ್ ಮಾಡಿರುವ ಡಿಕೆಶಿ, ಪ್ರಯತ್ನ ವಿಫಲವಾಗಬಹುದು, ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ! ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಗಂಗಾ ಆರತಿ ನೆರವೇರಿಸಿ, ಭಗವಂತನಲ್ಲಿ ಪ್ರಾರ್ಥಿಸಿದೆ. ಪುಣ್ಯಸ್ನಾನ ಮಾಡಿ ಭಕ್ತಿ-ಭಾವಗಳಲ್ಲಿ ಮಿಂದು ಭಾವಪರವಶನಾದೆ ಎಂದು ಬರೆದುಕೊಂಡಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಡಿಕೆಶಿ ಸಿಎಂ ರೇಸ್‌ನಲ್ಲಿದ್ದಾರೆ. ಡಿಕೆಶಿ ಜೊತೆ ಇನ್ನೂ ಹಲವರು ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿದ್ದು, ಸಿದ್ದು ಮಾತ್ರ 5 ವರ್ಷ ಈ ಕುರ್ಚಿ ನಂದೇ ಅಂತಿದ್ದಾರೆ. ಒಟ್ಟಾರೆ ಬೂದಿ ಮುಚ್ಚಿದ ಕೆಂಡದಂತಿರುವ ಕಾಂಗ್ರೆಸ್ ಒಳಜಗಳ ಸಿಎಂ ಕಾಂಪಿಟೇಶನ್ ಕಿಚ್ಚು ಹೊತ್ತಿಸುವಂತಿದೆ.
ಪ್ರಯತ್ನ ವಿಫಲವಾಗಬಹುದು,
ಆದರೆ ಪ್ರಾರ್ಥನೆಗೆ ಗೆಲುವು ನಿಶ್ಚಿತ!ತಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಿ ಗಂಗಾ ಆರತಿ ನೆರವೇರಿಸಿ, ಭಗವಂತನಲ್ಲಿ ಪ್ರಾರ್ಥಿಸಿದೆ. ಪುಣ್ಯಸ್ನಾನ ಮಾಡಿ ಭಕ್ತಿ-ಭಾವಗಳಲ್ಲಿ ಮಿಂದು ಭಾವಪರವಶನಾದೆ. pic.twitter.com/cWrSu5MZNc
— DK Shivakumar (@DKShivakumar) February 12, 2025