Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಚಿವ ಡಾ.ವೆಂಕಟೇಶ್ ಹೆಚ್.ಪಿ.ಮಾತನಾಡಿದ್ದು, ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಅಧ್ಯಕ್ಷರ ಬದಲಾವಣೆ ನಮ್ಮ ಹೈಕಮಾಂಡಗೆ ಬಿಟ್ಟ ವಿಚಾರ. ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ನಮ್ಮದೇನೂ ಇಲ್ಲ. ದೆಹಲಿ ಪ್ರಾಯಾಣ ಕೈಗೊಳ್ಳುವವರ ಸಮಸ್ಯೆ ಏನಿದೆ ನಮ್ಮಗೆ ಗೊತ್ತಿಲ್ಲ. ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ತೀರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
ಶಾಸಕ ಸಂಗಮೇಶ ಪುತ್ರ ಬಸವೇಶ ಮಹಿಳಾ ಅಧಿಕಾರಿ ನಿಂದನೆ ವಿಚಾರದ ಬಗ್ಗೆ ಮಾತನಾಡಿರುವ ಸಚಿವರು, ಯಾರೇ ಕಾನೂನು ಮೀರಿದೆ ಆದಲ್ಲಿ ಕ್ರಮ ಕೈಗೊಳ್ಳಬೇಕು. ಈ ಘಟನೆ ಬಗ್ಗೆ ನಮ್ಮಗೆ ಪೂರ್ಣ ಮಾಹಿತಿ ಇಲ್ಲ. ಇಂದು ಪತ್ರಿಕೆಗಳ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೇನೆ. ಅಧಿಕಾರಿಗಳ ಮೇಲೆ ದರ್ಪ ಮಾಡೋದು ತಪ್ಪು. ಆದರೆ ಇಲ್ಲೆ ಏನ ನಡೆದಿದೆ ಎಂಬುವುದು ಪೂರ್ಣ ಮಾಹಿತಿ ನನಗೆ ಇಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಪೊಲೀಸರ ಮೇಲೆ ದಾಳಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವರು, ಯಾರೇ ಆಗಲಿ ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು. ಯಾವುದೇ ಸಮಜಾ ಸಮುದಾಯ ಆಗಲಿ ಕಾನೂನು ಪಾಲನೆ ಮಾಡಬೇಕು. ಕಾನೂನು ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ತಪ್ಪು ಮಾಡಿದವರನ್ನು ಬೀಡೋ ಮಾತೆ ಇಲ್ಲ. ಬಿಜೆಪಿಯರಿಗೆ ಕೆಲಸ ಇಲ್ಲ ಸಣ್ಣಪುಟ್ಟ ವಿಚಾರ ದೊಡ್ಡದಾಗಿ ಬಿಂಬಿಸುತ್ತಾರೆ. ಕೆಪಿಸಿಸಿ ಅಧ್ಯಕ್ಷರ ರೇಸನಲ್ಲಿ ನೀವು ಇದ್ದೀರಾ ಅಂದ್ರೆ ಇದೇ ನನ್ನ ಕೊನೆಯ ರಾಜಕೀಯ. ಬದಲಾವಣೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಸಚಿವರು ಹೇಳಿದ್ದಾರೆ.