Political News: ಸವಣೂರಿನಲ್ಲಿ ನಡೆದ ಪ್ರಚಾರದ ವೇಳೆ, ಡಿಸಿಎಂ ಡಿ.ಕೆ.ಶಿವಕುಮಾರ್ ಪಾಲಿಕೆ ಸದಸ್ಯರಿಗೆ ಕಪಾಳಕ್ಕೆ ಹೊಡೆದಿದ್ದು, ಇದು ಕಾಂಗ್ರೆಸ್ ಸಂಸ್ಕೃತಿ ತೋರಿಸುತ್ತದೆ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದ್ದಾರೆ.
ಹೆಗಲ ಮೇಲೆ ಕೈ ಹಾಕಿದ್ದಕ್ಕೆ ಕೋಪಗೊಂಡಿರುವ ಡಿಕೆಶಿ, ಪಾಲಿಕೆ ಸದಸ್ಯರ ಕಪಾಳಕ್ಕೆ ಹೊಡೆದಿದ್ದಾರೆ. ಈ ಬಗ್ಗೆ ಮಾತನಾಡಿರುವ ಜೋಶಿ, ಆ ಮನುಷ್ಯ ಗಾಂಧಿಜಿಯ ತತ್ವದಂತೆ, ಇನ್ನೊಂದು ಕೆನ್ನೆ ತೋರಿಸುವ ಧೈರ್ಯ ಮಾಡದಿರುವುದು ಪುಣ್ಯ. ಕಾಂಗ್ರೆಸ್‌ನಲ್ಲಿ ಸ್ವಂತ ಕಾರ್ಯಕರ್ತರಿಗೆ ಮರ್ಯಾದೆ ಇಲ್ಲ. ನೇಹಾ ಪ್ರಕರಣದಲ್ಲಿ ಅವರ ಕುಟುಂಬಸ್ಥರ ಗೌರವ ಕಾಪಾಡುವ ಬದಲು, ಹೇಳಿಕೆ ನೀಡಿದರು. ಈಗ ಸವಣೂರಿನಲ್ಲಿ ಪಾಲಿಕೆ ಸದಸ್ಯನಿಗೆ ಕಪಾಳಮೋಕ್ಷ. ಇವರ ಪಕ್ಷದವರಿಗೇ ಹೀಗಾದರೆ, ಇನ್ನು ಇವರು ಜನಸಾಮಾನ್ಯರಿಗೆ ಯಾವ ಗೌರವ, ಮರ್ಯಾದೆ ಕೊಡುತ್ತಾರೆ ಎಂದು ಜೋಶಿ ಪ್ರಶ್ನಿಸಿದ್ದಾರೆ.
ಅಲ್ಲದೇ, ಬಿಜೆಪಿ ನಾಯಕರು ಯಾರೊಬ್ಬರ ಜೊತೆಗೂ ಇಷ್ಟು ಹೀನಾಯವಾಗಿ ವರ್ತಿಸುವುದಿಲ್ಲ. ಹೀಗಾಗಿಯೇ ಮೋದಿ ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ, ಮೋದಿ ಪರಿವಾರ ನಮ್ಮ ಪರಿವಾರ ಎಂಬ ಭಾವನೆ ಮೂಡಿದೆ ಎಂದು ಜೋಶಿ ಹೇಳಿದ್ದಾರೆ.
ಕಾಂಗ್ರೆಸ್ಸಿನವರು ಚುನಾವಣಾ ಸಮಯದಲ್ಲಿ ಕಾಣಿಸಿಕೊಳ್ಳುತ್ತಾರೆ. ಮತ್ತೆ ನಾಪತ್ತೆಯಾಗುತ್ತಾರೆ: ಬಿ.ವೈ.ವಿಜಯೇಂದ್ರ
ಧಾರವಾಡದಲ್ಲಿ ಪಾದಯಾತ್ರೆ ನಡೆಸಿ, ಮತಯಾಚಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ
ಶಿಕ್ಷಕಿ ಶಾಲೆಗೆ ಲೇಟಾಗಿ ಬಂದರೆಂದು ಹಲ್ಲೆ ಮಾಡಿ ಬಟ್ಟೆ ಹರಿದ ಪ್ರಾಂಶುಪಾಲರು