Friday, December 27, 2024

Latest Posts

ರಾಜರಾಜೇಶ್ವರಿಯ ಆಶೀರ್ವಾದದೊಂದಿಗೆ ಪ್ರಚಾರ ಕಾರ್ಯ ಆರಂಭಿಸಿದ ಡಿಸಿಎಂ ಡಿಕೆಶಿ

- Advertisement -

Political News: ಇಂದು ರಾಜರಾಜೇಶ್ವರಿ ಕ್ಷೇತ್ರದಲ್ಲಿ ಮತಯಾಚನೆ ಮಾಡುವ ಮುನ್ನ ಡಿಸಿಎಂ ಡಿ.ಕೆ.ಶಿವಕುಮಾರ್ ರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ರಾಜರಾಜೇಶ್ವರಿಯ ದರ್ಶನ ಮಾಡಿ, ಆಶೀರ್ವಾದ ಪಡೆದು, ಬಳಿಕ ಪ್ರಚಾರ ಕಾರ್ಯ ಆರಂಭಿಸಿದರು.

ಈ ವೇಳೆ ಮಾತನಾಡಿದ ಅವರು ಮತದಾನ ಕೇವಲ ನಮ್ಮ ಕೆಲಸ ಅಲ್ಲ ಅದು ನಮ್ಮ ಹಕ್ಕು,ನಮ್ಮ ಕರ್ತವ್ಯ. ಈ ದೇಶದ ನಾಯಕನ ಆಯ್ಕೆಯಲ್ಲಿ ನನ್ನದೂ ಪಾಲಿದೆ ಎನ್ನುವ ಸಂತೃಪ್ತಿ ನಾವು ಮತ ಚಲಾಯಿಸಿದಾಗ ಮಾತ್ರ ಸಿಗುತ್ತದೆ. ಯುವಕರಿಂದ ದೇಶದ ಅಭಿವೃದ್ಧಿ ಸಾಧ್ಯ. ಉತ್ತಮ ಜನಪ್ರತಿನಿಧಿಗಳನ್ನು ಆರಿಸುವ ಮೂಲಕ ದೇಶದ ಪ್ರಗತಿಗೆ ನಾವೆಲ್ಲಾ ಕೈ ಜೋಡಿಸಬೇಕಿದೆ. ಹಾಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಯೋಚಿಸಿ ಮತದಾನ ಮಾಡಿ. ಇದು ಸಣ್ಣ ಹೊಣೆಗಾರಿಕೆಯಲ್ಲ, ದೇಶವನ್ನೇ ಕಟ್ಟುವ ಜವಾಬ್ದಾರಿ ಎಂದು ಡಿಸಿಎಂ ಡಿಕೆಶಿ ಹೇಳಿದರು.

ಮತದಾನ ಎನ್ನುವುದು ಪ್ರಜಾಪ್ರಭುತ್ವವಾದಿ ದೇಶದ ಜೀವನಾಡಿ ಇದ್ದಂತೆ. ಪ್ರಜಾಪ್ರಭುತ್ವದ ಅಡಿಪಾಯವೇ ಪ್ರಜೆಗಳು. ಇಲ್ಲಿ ಧರ್ಮ, ಜಾತಿ, ಬಡವ, ಬಲ್ಲಿದ ಹೀಗೆ ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಮತದಾನ ಮಾಡಲು ಸಮಾನ ಅವಕಾಶವಿರುತ್ತದೆ. ಮತದಾನ ಎನ್ನುವುದು ಕೇವಲ ನಮ್ಮ ಹಕ್ಕು ಆಗಿರದೆ ನಮ್ಮ ಶಕ್ತಿಯೂ ಆಗಿರುತ್ತದೆ. ಹಾಗಾಗಿ ನೀವೆಲ್ಲಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜವಾಬ್ದಾರಿಯುತವಾಗಿ ಮತ ಚಲಾಯಿಸಿ, ದೇಶದಲ್ಲಿ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಡಿಕೆಶಿ ಹೇಳಿದರು.

ಪ್ರಜಾಪ್ರಭುತ್ವದ ಹಬ್ಬವಾಗಿರುವ ಲೋಕಸಭಾ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರಾದ ನೀವು ಯೋಚಿಸಿ ಮತಚಲಾಯಿಸಿ. ಅದು ನಿಮ್ಮ ಹಕ್ಕಾಗಿದೆ. ಪ್ರತಿಯೊಬ್ಬರೂ ಮತದಾನ ಮಾಡಬೇಕು. ಆ ಜವಾಬ್ದಾರಿ ಎಲ್ಲರ ಮೇಲಿದೆ. ದೇಶದಲ್ಲಿ ಬದಲಾವಣೆ ಅಗತ್ಯವಿದೆ. ಅದಕ್ಕಾಗಿ ನಾವೆಲ್ಲರೂ ಮತದಾನ ಮಾಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲರಿಗೂ ಮತದಾನದ ಅವಕಾಶ ಮಾಡಿಕೊಟ್ಟಿದ್ದಾರೆ. ನಮ್ಮ ಹಕ್ಕುಗಳನ್ನು ನಾವು ಕೇಳುತ್ತೇವೆ. ಆದರೆ, ಅದನ್ನು ನಾವು ಕೇಳಬೇಕಾದರೆ ಚುನಾವಣೆಯಲ್ಲಿ ಮತದಾನ ಮಾಡುವ ಮೂಲಕ ನಮ್ಮ ಕರ್ತವ್ಯವನ್ನು ಪಾಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಜೋಶಿಯವರನ್ನ‌ ಸೋಲಿಸುವುದೇ ನಮ್ಮ ಗುರಿ. ಅವರನ್ನು ಎದುರಿಸಲು ನಾನೊಬ್ಬನೇ ಮಠಾಧೀಶ ಸಾಕು: ದಿಂಗಾಲೇಶ್ವರ ಶ್ರೀ

ಕರ್ಕಶ ಶಬ್ದ ಮಾಡುವ ಬೈಕ್ ಗಳಿಗೆ ಬಿಸಿ: ಸ್ಯಾಲೆನ್ಸರ್ ವಶಕ್ಕೆ ಪಡೆದ ಪೊಲೀಸರು

ಬೈಕ್‌ನಿಂದ ಆಯತಪ್ಪಿ ಬಿದ್ದು ಹೆಡ್‌ಕಾನ್ಸ್‌ಟೇಬಲ್ ಸಾವು

- Advertisement -

Latest Posts

Don't Miss