Hubballi News: ಹುಬ್ಬಳ್ಳಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಜಗದೀಶ್ ಶೆಟ್ಟರ್‌ರನ್ನ ಭೇಟಿ ಮಾಡಿದ್ದು, ಬಳಿಕ, ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಸಮಾಜಕ್ಕೆ ಸತ್ಯ ಸಂಗತಿ, ಎಲ್ಲ ವರ್ಗದ ಜನರನ್ನು ರಕ್ಷಣೆ ನೀವು ಮಾಡಿದ್ದೀರಿ. ನಾನು ಜಗದೀಶ್ ಶೆಟ್ಟರ್ ,ಸವದಿ ಭೇಟಿ ಕಾರ್ಯಕ್ರಮ ಮಾತ್ರ ಹಾಕಿಕೊಂಡಿದ್ದೇ. ಬಿ ಫಾರಂ ಕೊಟ್ಟ ಮೇಲೆ Jagadish Shettar ಜೊತೆ ಮಾತಾಡಿರಲಿಲ್ಲ.. ನಾನು ಪ್ರಚಾರದಲ್ಲಿ ಬ್ಯೂಸಿ ಆಗಿದ್ದೆ.. ಶೆಟ್ಟರ್, ಸವದಿ,ಗುಬ್ಬಿ ಶ್ರೀನಿವಾಸ ಅವರಿಂದ ನಮಗೆ ಶಕ್ತಿ ಬಂದಿದೆ ಎಂದು ಡಿಕೆಶಿ ಹೇಳಿದ್ದಾರೆ.
ಅಲ್ಲದೇ, ಸೋಲು ಗೆಲವು ಇರೋದೆ. ಅವರು ನಮಗೆ ಮಾರ್ಗದರ್ಶನ ಕೊಟ್ಟಿದ್ದಾರೆ. ಅವರಿಂದ ಬದಲಾಗಣೆ ಆಯ್ತು. ನಾವು ಪ್ರತಿಯೊಂದು ಹಂತದಲ್ಲೂ ಸರ್ಕಾರದ ತಪ್ಪು ಮುಂದಿಟ್ಟಿದ್ದೇವೆ. ಇವತ್ತು ನಮಗೆ ದೊಡ್ಡ ಅವಕಾಶ ನಮಗೆ ಸಿಕ್ಕಿದೆ.. ದೇವರೂ ವರನೂ ಕೊಡಲ್ಲ ಶಾಪನೂ ಕೊಡಲ್ಲ,ಅವಕಾಶ ಮಾತ್ರ ಕೊಡ್ತಾನೆ. ನಾವು ಅದನ್ನು ಉಪಯೋಗಿಸಿಕೊಳ್ಳಬೇಕು ಎಂದಿದ್ದಾರೆ.
ಇವತ್ತು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. ನಾಳೆ ಸಚಿವ ಸಂಪುಟ ಸಭೆ ಇದೆ. ನಾವು ನುಡಿದಂತೆ ನಡೆಯುತ್ತೇವೆ. ಶೆಟ್ಟರ್ ಜೊತೆ ನಾವು ಇರ್ತೀವಿ. ನಮಗೆ ವರಿಷ್ಠರ ಆದೇಶ ಇದೆ. ರಾಷ್ಟ್ರೀಯ ಅಧ್ಯಕ್ಷರ ಆದೇಶದ ಮೇಲೆ ಕೆಲ ಸಂದೆಶ ಹೇಳಬೇಕಿತ್ತು. ಶೆಟ್ಟರ್ ಗೆ ಸಂದೇಶ ತಲುಪಿಸಿದ್ದೇವೆ.. Congress ಪಕ್ಷ ಅವರ ಜೊತೆ ಇದೆ ಎಂದು D.K.Shivakumar ಹೇಳಿದ್ದಾರೆ.
ಶೆಟ್ಟರ್ ಗೆ ಸ್ಥಾನ ಮಾನ ಕೊಡೋ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿಕೆಶಿ.. ನಾನು ಒಂದೇ ಮಾತಿನಲ್ಲಿ ಹೇಳ್ತೀನಿ. ಪಕ್ಷ ಅವರ ಜೊತೆ ಇದೆ. ನಾವೇನು ಗೌಪ್ಯವಾಗಿ ಇಡಲ್ಲ,ನಿಮಗೆ ಹೇಳ್ತೀವಿ ಎಂದು ಹೇಳಿದ್ದಾರೆ.
ಶಾಸಕರ ಮನೆ ಹತ್ತಿರವೇ ಕುಡುಕರ ಅಡ್ಡೆ: ಸಿಎಲ್-7 ವಿರುದ್ಧ ಗುಡುಗಿದ ಶಾಸಕ ಸ್ವರೂಪ್