- Advertisement -
ಕರ್ನಾಟಕ ಟಿವಿ : ಕನಕಪುರದ ಬಂಡೆಗೆ ಡಿಸಿಎಂ ಡಾ. ಅಶ್ವಥ್ ನಾರಾಯಣ್ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ. ದ್ವೇಷ ರಾಜಕಾರಣದ ಆರೋಪ ಮತ್ತು ನಿಮ್ಮ ಕುಕೃತ್ಯಗಳಿಗೆ ಅನುಕಂಪಗಿಟ್ಟಿಸುವ ನಿಮ್ಮ ಪ್ರಯತ್ನಕ್ಕೆ ಫಲ ಸಿಗಲ್ಲ. ನೀವು ಬಿತ್ತಿರುವ ಫಲವನ್ನೇ ನೀವು ಉಣ್ಣಬೇಕು ಅಂತ ಡಿಕೆಶಿಗೆ ಡಾಕ್ಟರ್ ಟಾಂಗ್ ನೀಡಿದ್ದಾರೆ.
ಭಾರತ ಬದಲಾಗುತ್ತಿದೆ, ನವಭಾರತ ನಿರ್ಮಾಣ ವಾಗುತ್ತಿದೆ. ಇಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ಇಂಥಹ ಸಂದರ್ಭದಲ್ಲಿ ನೀವು ಕೇಂದ್ರ ಸರ್ಕಾರದ ಮೇಲೆ ದ್ವೇಷ ರಾಜಕಾರಣ ಆರೋಪ ಮಾಡಿರೋದು ನಿಮ್ಮ ಹತಾಶಾಮನೋಭಾವನೆ ಅಂತ ಟ್ವೀಟರ್ ಮೂಲಕ ಡಿಕೆಶಿಗೆ ಡಾಕ್ಟರ್ ತಿರುಗೇಟು ನೀಡಿದ್ದಾರೆ.
- Advertisement -