Saturday, March 22, 2025

Latest Posts

ಡಿಸಿಎಂ ಅವರದ್ದೇ ಒಂದು ಪೆನ್‌ಡ್ರೈವ್ ಇದೆ: ಹೊಸ ಬಾಂಬ್ ಸಿಡಿಸಿದ ಯತ್ನಾಳ್

- Advertisement -

Political News: ರಾಜ್ಯದಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಸುದ್ದಿ. ಪ್ರಜ್ವಲ್ 2 ಸಾವಿರಕ್ಕೂ ಹೆಚ್ಚಿನ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ಎಸಗಿದ್ದಾರೆಂದು ಈ ಕೇಸ್‌ನಲ್ಲಿ ಆರೋಪಿಸಲಾಗಿದೆ. ಅಲ್ಲದೇ, ಪ್ರಜ್ವಲ್ ಮಾಡಿದ ತಪ್ಪಿಗೆ, ಜೆಡಿಎಸ್‌ನಿಂದ ಅವರನ್ನು ಈಗಾಗಲೇ ಉಚ್ಛಾಟನೆ ಮಾಡಲಾಗಿದೆ.

ಇನ್ನು ಇದೇ ವೇಳೆ ಬೀದರ್‌ನಲ್ಲಿ ಮಾತನಾಡಿರುವ ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಇನ್ನೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಡಿಸಿಎಂ ಅವರದ್ದೇ ಒಂದು ಪೆನ್‌ಡ್ರೈವ್ ಇದೇ ಎಂದು ಯತ್ನಾಳ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಡಿ.ಕೆ.ಶಿವಕುಮಾರ್ ವಿರುದ್ಧ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್‌ಡ್ರೈವ್ ಬಗ್ಗೆ ಮಾತನಾಡಿರುವ ಯತ್ನಾಳ್, ನಾನು ವೈಯಕ್ತಿಕವಾಗಿ ಮಾತನಾಡಲು ಹೋಗುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ, ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳಲಾಗುತ್ತದೆ. ಯಾರು ತಪ್ಪು ಮಾಡಿದ್ರೂ ತಪ್ಪೇ, ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಹೇಳಿದ್ದಾರೆ.

ಅಲ್ಲದೇ ಮತ್ತೊಂದು ತಾವು ಸಿಎಂ ಆಗುವ ಬಗ್ಗೆ ಆಸೆ ವ್ಯಕ್ತಪಡಿಸಿರುವ ಯತ್ನಾಳ್, ನಾನು ಸಿಎಂ ಆಗೇ ಆಗುತ್ತೇನೆ. ನಾನೇಕೆ ಸಿಎಂ ಆಗಬಾರದು..? ನಾನು ಸಿಎಂ ಆದರೆ ಬುಲ್ಡೋಜರ್ ಸದ್ದು ಮಾಡ್ತಾವೆ. ಪಾಕಿಸ್ತಾನಕ್ಕೆ ಜಿಂದಾಬಾದ್ ಎನ್ನುವವರಿಗೆ ನಾನು ತಕ್ಕ ಪಾಠ ಕಲಿಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.

ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

ಮತದಾನ ಜಾಗೃತಿ ಮೂಡಿಸಿ ಗಮನಸೆಳೆದ ಪುಟಾಣಿಗಳು

ನೇಹಾಗೆ ಆದಂತಹ ಘಟನೆ ಇನ್ನೊಬ್ಬರಿಗೆ ಆಗಬಾರದು ಅನ್ನೋದು ನಮ್ಮ ಬೇಡಿಕೆ: ಮುರುಗೇಶ್ ನಿರಾಣಿ

- Advertisement -

Latest Posts

Don't Miss