Sunday, December 22, 2024

Latest Posts

ದಾಂಡೇಲಿ ಪ್ರವಾಸಕ್ಕೆ ಬಂದಿದ್ದ ಒಂದೇ ಕುಟುಂಬದ ಆರು ಜನರ ಸಾವು…

- Advertisement -

Dandeli News: ದಾಂಡೇಲಿ: ಬೇಸಿಗೆ ರಜೆಗೆ ದಾಂಡೇಲಿಗೆ ಪ್ರವಾಸಕ್ಕೆ ಬಂದಿದ್ದ ಒಂದು ಕುಟುಂಬದ 8 ಜನರಲ್ಲಿ 6 ಜನ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಹುಬ್ಬಳ್ಳಿಯಿಂದ ಬಂದಿದ್ದ ನಜೀರ್ ಅಹಮದ್(40), ರೇಷ್ಮಾ ಉನ್ನಿಸಾ(30) ಅಲ್ಫೀಯಾ ಅಹಮದ್(10), ಮೋಹಿನ್ ಅಹಮ್ಮದ್(6), ಅಬೀದ್ ಅಹಮದ್(12) ಇಫ್ರಾ ಅಹಮ್ಮದ್(15) ಮೃತಪಟ್ಟಿದ್ದಾರೆ. ಮೊದಲು ಓರ್ವ ಮಗು ನೀರಿನಲ್ಲಿ ಈಜಲು ಹೋಗಿ, ಈಜು ಬಾರದೇ, ಕಿರುಚಾಡಿತ್ತು. ಆಕೆಯನ್ನು ರಕ್ಷಿಸಲು ಹೋಗಿ ಉಳಿದ 5 ಜನರು ಮೃತಪಟ್ಟಿದ್ದಾರೆ. ದಡದಲ್ಲಿ ಇದ್ದ ಇಬ್ಬರು ಬದುಕುಳಿದಿದ್ದಾರೆ.

ಇನ್ನು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸ್ಥಳಕ್ಕೆ ದಾಂಡೇಲಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ದಾಂಡೇಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಬಗ್ಗೆ ದಾಂಡೇಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರಂಜನ ಅವರ ಮಗಳು ಸತ್ತಿಲ್ಲ. ನಮ್ಮ‌ ಸಹೋದರಿ ತೀರಿ ಹೋಗಿದ್ದಾಳೆ: ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ

ಈ ದೇಶಕ್ಕೆ ಹಿಡಿದಿರುವ ಶನಿ ಅಂದರೆ ಅದು ಮೋದಿ: ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆ..

ನೇಹಾ ಮನೆಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಭೇಟಿ: ಸಿಎಂ, ಗೃಹಸಚಿವರ ಹೇಳಿಕೆಗೆ ಆಕ್ರೋಶ..

- Advertisement -

Latest Posts

Don't Miss