Saturday, February 8, 2025

Latest Posts

Delhi Result: ಕೇಜ್ರಿವಾಲ್ ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ: ಸಂಸದ ಜಗದೀಶ್ ಶೆಟ್ಟರ್

- Advertisement -

Hubli News: ಹುಬ್ಬಳ್ಳಿ ನ್ಯೂಸ್: ಹುಬ್ಬಳ್ಳಿಯಲ್ಲಿಂದು ಕರ್ನಾಟಕ ಟಿವಿ ಜೊತೆ ಮಾತನಾಡಿರುವ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್, ದಿಲ್ಲಿ ಜನರ‌ ಆರ್ಶೀವಾದ ಬಿಜೆಪಿಗೆ ಸಿಕ್ಕಿದೆ. ಕ್ರೇಜಿವಾಲ್ ತಮ್ಮ ಕ್ರೇಜ್ ಕಳೆದುಕೊಂಡಿದ್ದಾರೆ. ಅಣ್ಣಾ ಹಜಾರೆ ಹೋರಾಟವನ್ನು ಬಳಸಿಕೊಂಡು ಅಧಿಕಾರದ ಗದ್ದುಗೆ ಕ್ರೇಜಿವಾಲ್ ಏರಿದ್ದರು. ಅವರ ಆಡಳಿತದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಜನರಿಗೆ ನಿರಾಸೆಯಾಗಿದೆ. ಹೀಗಾಗಿ ದಿಲ್ಲಿಯ ಜನ ಬಿಜೆಪಿ ಕೈ ಹಿಡಿದಿದ್ದಾರೆ ಎಂದು ಶೆಟ್ಟರ್ ಹೇಳಿದ್ರು.

ಕಾಂಗ್ರೆಸ್ ಡೇ ಬಾಯ್ ಡೇ ಕೊಲ್ಯಾಪ್ಸ್ ಆಗತಿದೆ. ಇಡೀ ರಾಷ್ಟ್ರದಲ್ಲಿ ಕಾಂಗ್ರೆಸ್ ಕುಸಿತಿದೆ. ತೆಲಂಗಾಣ, ಕರ್ನಾಟಕದಲ್ಲಿ ಮಾತ್ರ ಅಧಿಕಾರದಲ್ಲಿದೆ. ಅದು ನಮ್ಮ ತಪ್ಪಿನಿಂದ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿದೆ. ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ. ತೆಲಂಗಾಣ ,ಕರ್ನಾಟಕ ಸರ್ಕಾರ ಯಾವಾಗ ಬೇಕಾದರೂ ಪತನ ಆಗಬಹುದು. ಈ ಚುನಾವಣೆಯಿಂದ ಕಾಂಗ್ರೆಸ್ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಒಂದು ಕುಟುಂಬದ ಪಕ್ಷ.

ಡಬಲ್ ಇಂಜಿನ್ ಸರ್ಕಾರ ಎಲ್ಲಿದೆ ಅಲ್ಲಿ ಮಾತ್ರ ಒಳ್ಳೆ ಕೆಲಸಗಳು ಆಗಿದೆ. ಹೀಗಾಗಿ ಡಬಲ್ ಇಂಜಿನ್ ಸರ್ಕಾರ ತಂದಿದ್ದಾರೆ. ದೆಹಲಿ ಜನ ಮೋದಿ ನಾಯಕತ್ವ ಒಪ್ಪಿದ್ದಾರೆ‌. ದೆಹಲಿಯನ್ನು ಅಭಿವೃದ್ದಿ ಮಾಡೋದಾಗಿ ಮೋದಿ ಹೇಳಿದ್ದಾರೆ‌. ನಾವು ಸ್ಪಷ್ಟ ಬಹುಮತದಲ್ಲಿ ಅಧಿಕಾರಕ್ಕ ಬರುತ್ತೇವೆ. ರಾಹುಲ್ ಗಾಂಧಿ ಇರೋವರೆಗೂ ಕಾಂಗ್ರೆಸ್ ಉದ್ದಾರ ಆಗಲ್ಲ ಎಂದು ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ಇನ್ನು ಬಿಜೆಪಿ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿರುವಂಥ ಶೆಟ್ಟರ್, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ.  ಭಿನ್ನಮತಕ್ಕೆ ನಾಯಕರು ಇತಿಶ್ರೀ ಹಾಕ್ತಾರೆ. ಅಧ್ಯಕ್ಷರ ಚುನಾವಣೆ ಬಂದಿದೆ. ಸರ್ವಾನುಮತದಿಂದ ಅಧ್ಯಕ್ಷರ ಆಯ್ಕೆ ಆಗಬೇಕು. ಚುನಾವಣೆ ಅನ್ನೋದು ಒಂದು ಪ್ರೊಸೆಸ್ ಎಂದು ಶೆಟ್ಟರ್ ಹೇಳಿದ್ದಾರೆ.

- Advertisement -

Latest Posts

Don't Miss