Wednesday, March 12, 2025

Latest Posts

ಡಿಲಿಮಿಟೇಷನ್‌ನಿಂದ ಕರ್ನಾಟಕದ 2 ಎಂಪಿ ಕ್ಷೇತ್ರಗಳಿಗೆ ಕೊಕ್ಕೆ : ಜೈ ರಾಂ ರಮೇಶ್‌ ಕಳವಳ

- Advertisement -

Political News: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ತಮಿಳು ನಾಡು ವಿರೋಧ ವ್ಯಕ್ತಪಡಿಸುತ್ತಿದೆ, ಅಲ್ಲದೆ ಬಹುತೇಕ ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳು ಆಕ್ಷೇಪ ಹೊರಹಾಕುತ್ತಿವೆ. ಅಲ್ಲದೆ ಈ ರೀತಿಯಾಗಿ ಕ್ಷೇತ್ರ ಮರುವಿಂಗಡಣೆಯಿಂದ ಜನಸಂಖ್ಯೆಯನ್ನು ನಿಯಂತ್ರಿಸಿರುವ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗಲಿದೆ. ಅಲ್ಲದೆ ಕರ್ನಾಟಕ ಸೇರಿದಂತೆ 9 ರಾಜ್ಯಗಳಿಗೂ ಇದರ ಹೊಡೆತ ಬೀಳಲಿದೆ ಎಂಬ ಮಾಹಿತಿ ದೊರೆತಿದೆ.

ಅಲ್ಲದೆ ಈ ಕುರಿತ ಟ್ವಿಟ್ಟರ್‌ನಲ್ಲಿ ಪೋಸ್ಟ್‌ ಮಾಡಿ ವಿವರವನ್ನು ನೀಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್, ಲೋಕಸಭೆಯಲ್ಲಿ ರಾಜ್ಯಗಳಾದ್ಯಂತ ಸ್ಥಾನಗಳ ಹಂಚಿಕೆಯು ಪ್ರಸ್ತುತ 1971 ರ ಜನಗಣತಿಯನ್ನು ಆಧರಿಸಿದೆ. ಇದರಿಂದ ತಮಿಳುನಾಡು, ಕೇರಳ ತಲಾ 8, ಆಂಧ್ರಪ್ರದೇಶ ಮತ್ತು ತೆಲಂಗಾಣ ತಲಾ 8, ಒಡಿಶಾ 3, ಪಶ್ಚಿಮ ಬಂಗಾಳ 4, ಕರ್ನಾಟಕ 2, ಹಿಮಾಚಲ ಪ್ರದೇಶ 1, ಪಂಜಾಬ್ ಹಾಗೂ ಉತ್ತರಾಖಂಡ ತಲಾ 1 ಸ್ಥಾನವನ್ನು ಕಳೆದುಕೊಳ್ಳಲಿವೆ.

ಇನ್ನೂ ಪ್ರಮುಖವಾಗಿ ಮಹಾರಾಷ್ಟ್ರ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅಲ್ಲದೆ ಉತ್ತರ ಪ್ರದೇಶ 11, ಬಿಹಾರ 10, ರಾಜಸ್ಥಾನ 6, ಮಧ್ಯಪ್ರದೇಶ 4, ಜಾರ್ಖಂಡ್, ಹರಿಯಾಣ, ಗುಜರಾತ್, ದೆಹಲಿ ಹಾಗೂ ಛತ್ತೀಸ್‌ಗಢ ರಾಜ್ಯಗಳು ತಲಾ 1 ಕ್ಷೇತ್ರಗಳ ಲಾಭ ಪಡೆಯಲಿವೆ ಎಂದು ಜೈರಾಂ ರಮೇಶ್ ತಿಳಿಸಿದ್ದಾರೆ.

ಮುಖ್ಯವಾಗಿ ಈ ವಿಚಾರದಲ್ಲಿ ಅವರು 2001 ಮತ್ತು 2011 ಜನಗಣತಿಯ ಡೇಟಾವನ್ನು ಬಳಸಿಕೊಂಡು ಇಬ್ಬರು ವಿದ್ವಾಂಸರಾದ ಮಿಲನ್ ವೈಷ್ಣವ್ ಮತ್ತು ಜೇಮೀ ಹಿಂಟ್ಸನ್ ಅವರು ಮಾರ್ಚ್ 2019 ರಲ್ಲಿ ಮಾಡಿದ್ದ ವಿಶ್ಲೇಷಣೆಯನ್ನು ಉಲ್ಲೇಖಿಸಿದ್ದಾರೆ. ಇನ್ನೂ ಇದರ ಪ್ರಕಾರ 2026ರ ಅಂದಾಜು ಜನಸಂಖ್ಯೆಯನ್ನು ನಾವು ಪರಿಗಣಿಸಿದಾಗ ಲೋಕಸಭಾ ಕ್ಷೇತ್ರಗಳ ಹಂಚಿಕೆ ಯಾವ ರೀತಿಯಾಗಿ ಬದಲಾವಣೆಯಾಗುತ್ತದೆ ಎಂಬುದನ್ನು ಈ ವಿಶ್ಲೇಷಣೆಯಲ್ಲಿ ವಿವರವಾಗಿ ನೀಡಲಾಗಿದೆ ಎಂದಿದ್ದಾರೆ.

ಅಲ್ಲದೆ ಕೌಟುಂಬಿಕ ಯೋಜನೆಯನ್ನು ಶಿಸ್ತುಬದ್ಧವಾಗಿ ನಿರ್ವಹಣೆ ಮಾಡಿ, ಅದನ್ನು ಜಾರಿಗೆ ತಂದಿರುವ ರಾಜ್ಯಗಳು ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳನ್ನು ಕಳೆದುಕೊಳ್ಳಲಿವೆ. ಇನ್ನೂ ದೇಶದ ಹಿತದೃಷ್ಟಿಯಿಂದ ಕುಟುಂಬ ಯೋಜನೆಯನ್ನು ಜಾರಿಗೆ ತಂದ ರಾಜ್ಯಗಳು ತಾವು ಮಾಡಿರುವ ಕೆಲಸಕ್ಕೆ ಬೆಲೆ ತೆರಬೇಕಾಗಿದೆ ಎಂದು ಜೈರಾಂ ರಮೇಶ್‌ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

Latest Posts

Don't Miss