Tuesday, May 14, 2024

Latest Posts

ಮದ್ಯದಂಗಡಿ ಮುಚ್ಚಬೇಕೆಂದು ಆಗ್ರಹಿಸಿ, ಮತದಾನ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು..

- Advertisement -

Kolar News: ಕೋಲಾರ: ಕೋಲಾರ ತಾಲೂಕಿನ ಬೆಗ್ಲಿಬೆಣಜೇನಹಳ್ಳಿ ಗ್ರಾಮಸ್ಥರು, ಮದ್ಯದಂಗಡಿ ಮುಚ್ಚಬೇಕೆಂದು ಆಗ್ರಹಿಸಿ, ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು.

ಮಧ್ಯಾಹ್ನ 1 ಗಂಟೆಯಾದ್ರೂ ಗ್ರಾಮದ ಒಬ್ಬರೂ ಮತದಾನ ಮಾಡಿಲ್ಲ. ಈ ಕಾರಣಕ್ಕೆ ಸ್ಥಳಕ್ಕೆ ಬಂದ ಚುನಾವಣಾ ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅದು ವಿಫಲವಾಯಿತು. ಬೆಣಜೇನಹಳ್ಳಿ ಗ್ರಾಮದಲ್ಲಿ 577 ಮತದಾರರಿದ್ದು, ರಸ್ತೆ ಮಧ್ಯೆಯೇ ಇರುವ MSIL ಬಾರ್ ಇದೆ. ಇದನ್ನು ತೆರವುಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಆದರೂ ಕೂಡ ಬಾಾರ್ ತೆರವುಗೊಳಿಸಿರಲಿಲ್ಲ. ಹಾಗಾಗಿ ಗ್ರಾಮಸ್ಥರು ಮತದಾನ ಬಹಿಷ್ಕಾರಕ್ಕೆ ಕರೆ ಕೊಟ್ಟಿದ್ದರು.

ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು, ಹಾಲಿ ಸಂಸದ ಮುನಿಸ್ವಾಮಿ, ಎಂಎಲ್ ಸಿ ಇಂಚರ ಗೋವಿಂದ ರಾಜು, ಸಿಎಂಆರ್ ಶ್ರೀನಾಥ್ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸಿ ಮತದಾನ ಮಾಡುವಂತೆ ಮತದಾರರಲ್ಲಿ ಮನವಿ ಮಾಡಿದ್ದಾರೆ.  ಆದ್ರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕೆಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದರು.  ಸಂಸದ ಎಸ್ ಮುನಿಸ್ವಾಮಿ ಜನರ ಮನವಲಿಸಲು ಪ್ರಯತ್ನಿಸಿದ್ದಾರೆ.

ಇನ್ನೊಂದೆಡೆ  ಕೋಲಾರದಲ್ಲಿ ದುಬೈನಿಂದ ಬಂದ ವ್ಯಕ್ತಿಯೋರ್ವ ಮತದಾನ ಮಾಡಿದ್ದಾರೆ. ಅಬ್ದುಲ್ ಸುಬಾನ್ ಎಂಬ ವ್ಯಕ್ತಿ ದುಬೈನಲ್ಲಿ ಕೆಲಸ ಮಾಡುತ್ತಾರೆ. ಇವರು ಓಟ್ ಹಾಕಲೆಂದೇ, ಕೋಲಾರಕ್ಕೆ ಬಂದಿದ್ದು, ಮತದಾನ ಮಾಡಿದ್ದಾರೆ. ಕೋಲಾರದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆ ಸಂಖ್ಯೆ 117ರಲ್ಲಿ ಮತದಾನ ಮಾಡಿದ್ದಾರೆ.

ನನ್ನ ಮಗಳ ಸಾವಿಗೆ ಫಯಾಝ್ ಸಾವು ನ್ಯಾಯವಾಗಬೇಕು: ನಿರಂಜನಯ್ಯ ಆಗ್ರಹ..!

120 ದಿನದಲ್ಲಿ ನ್ಯಾಯ ಕೊಡಸ್ತಿವಿ, ನಿರಂಜನಯ್ಯ ಕುಟುಂಬದ ಜೊತೆಗಿದ್ದೇವೆ: ಸಿಎಂ ಸಿದ್ಧರಾಮಯ್ಯ

ನೇಹಾ ಮನೆಗೆ ಸಿಎಂ ಸಿದ್ಧರಾಮಯ್ಯ ಭೇಟಿ: ಕುಟುಂಬಸ್ಥರಿಗೆ ಸಾಂತ್ವನ

- Advertisement -

Latest Posts

Don't Miss