ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಭಾರತೀಯರ ಮೇಲಿನ ಶೋಷಣೆ, ದಾಳಿ ಹೆಚ್ಚಾಗುತ್ತಿತ್ತು. ಇದೀಗ ಆಸ್ಟ್ರೇಲಿಯಾದ ಸ್ವಾಮಿನಾರಾಯಣ ದೇಗುಲ ಧ್ವಂಸ ಮಾಡಲಾಗಿದ್ದು, ಖಲಿಸ್ತಾನಿಗಳು ಈ ಕೃತ್ಯವೆಸಗಿದ್ದಾರೆಂದು ಹೇಳಲಾಗಿದೆ.
ಈಗ ಕೆಲ ತಿಂಗಳುಗಳಿಂದ ಖಲಿಸ್ತಾನಿಗಳ ಕುಕೃತ್ಯ ಕಡಿಮೆಯಾಗಿತ್ತು. ಆದರೆ ಮತ್ತೆ ಅವರ ದಾಂಧಲೆ ಶುರುವಾಗಿದ್ದು, ದೇವಸ್ಥಾನಕ್ಕೆ ಕಪ್ಪು ಮಸಿ ಬಳಿದಿದ್ದಾರೆ. ಬ್ರಿಸ್ಟೇನ್ ನಗರದಲ್ಲಿರುವ ಲಕ್ಷ್ಮೀ ನಾರಾಯಣ ದೇಗುಲದಲ್ಲಿ ಈ ಕೃತ್ಯ ನಡೆದಿದ್ದು, ಕಪ್ಪು ಮಸಿ ಬಳಿದು, ದೇಗುಲವನ್ನು ಧ್ವಂಸ ಮಾಡಿದ್ದಾರೆ. ಖಲಿಸ್ತಾನಿ ಸಂಘಟನೆಯ ಬೆಂಬಲಿಗರು ಈ ಕೃತ್ಯವನ್ನು ಮಾಡಿದ್ದು, 2 ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ 4ನೇ ಘಟನೆ ಇದಾಗಿದೆ. ಬೆಳಿಗ್ಗೆ ಭಕ್ತರು ಪೂಜೆ ಸಲ್ಲಿಸಲು ಆಗಮಿಸಿದಾಗ, ಈ ಘಟನೆ ನಡೆದಿದ್ದು ಬೆಳಕಿಗೆ ಬಂದಿದೆ.
ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್: ಸಿದ್ದರಾಮಯ್ಯ ಸತ್ಯ ಒಪ್ಪಿಕೊಂಡಿದ್ದಾರೆ ಎಂದ ಹೆಚ್ಡಿಕೆ
‘ಹೇಗೂ ಸುಳ್ಳು ಹೇಳ್ತೀರಾ, ಹೊಸ ಸುಳ್ಳುಗಳನ್ನಾದರೂ ಹೇಳೋಕ್ಕಾಗೊಲ್ವಾ ?’