ಪಾಕಿಸ್ತಾನದಲ್ಲಿ ಹದಗೆಟ್ಟ ಆರ್ಥಿಕ ಪರಿಸ್ಥಿತಿ: 1 ಡಜನ್ ಮೊಟ್ಟೆಯ ಬೆಲೆ 400 ರೂಪಾಯಿ

International News: ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, 1 ಮೊಟ್ಟೆಯ ಬೆಲೆ 33 ರೂಪಾಯಿಯಾಗಿದೆ. ಅಲ್ಲದೇ, ಈರುಳ್ಳಿ ಬೆಲೆ ಕೆಜಿಗೆ 250 ರೂಪಾಯಿಯಾಗಿದೆ.

ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು, ಅಕ್ಕಿ ಬೇಳೆ, ತರಕಾರಿ, ಮೊಟ್ಟೆಯ ರೇಟ್ ಹೆಚ್ಚುತ್ತಲೇ ಹೋಗುತ್ತಿದೆ. ಅಲ್ಲಿನ ಜನರ ಪರಿಸ್ಥಿತಿ ಒಂದು ಹೊತ್ತು ಊಟ ಸಿಕ್ಕರೆ ಸಾಕು ಎಂಬಂತಾಗಿದೆ. ಸರ್ಕಾರದ ಪ್ರತೀ ಅಗತ್ಯ ವಸ್ತುವಿಗೂ, ಇಂತಿಷ್ಟು ಬೆಲೆ ಎಂದು ನಿಗದಿ ಮಾಡಿದ್ದರೂ ಕೂಡ, ಮಾರುಕಟ್ಟೆಯಲ್ಲಿ ಮಾರಾಟಗಾರರು, ಮನಸ್ಸಿಗೆ ಬಂದಂತೆ, ಬೆಲೆ ಹೇಳಿ ತರಕಾರಿ, ಹಣ್ಣು, ದಿನಸಿ, ಮೊಟ್ಟೆಯನ್ನು ಮಾರಾಟ ಮಾಡುತ್ತಿದ್ದಾರೆ.

ಈರುಳ್ಳಿ ಕೆಜಿಗೆ 175 ರೂಪಾಯಿ ಇದ್ದರೂ ಕೂಡ ಪಾಕಿಸ್ತಾನದ ಮಾರಾಟಗಾರರು, 200ರಿಂದ 250 ರೂಪಾಯಿಗೆ ಈರುಳ್ಳಿಯನ್ನು ಮಾರಾಟ ಮಾಡುತ್ತಿದ್ದಾರೆ. ಒಂದು ಡಜನ್ ಮೊಟ್ಟೆಯ ಬೆಲೆ 400 ರೂಪಾಯಿಯಾಗಿದೆ. ಒಂದು ಕೆಜಿ ಚಿಕನ್‌ಗೆ 615 ರೂಪಾಯಿಯಾಗಿದೆ. ಮಾರಾಟಗಾರರ ಆಟಕ್ಕೆ ಜನಸಾಮಾನ್ಯರು ಪಾಡು ಪಡುತ್ತಿದ್ದಾರೆ.

ಬಾಯ್‌ಫ್ರೆಂಡ್‌ನ ಮಗುವಿಗೆ ನೇಲ್‌ಪಾಲಿಶ್ ರಿಮೂವರ್ ತಿನ್ನಿಸಿ ಕೊಲೆ ಮಾಡಿದ ಪಾಪಿ

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಭೇಟಿ ನೀಡಿದ ಬ್ರಿಟೀಷ್ ರಾಯಭಾರಿ: ಆಕ್ಷೇಪ ವ್ಯಕ್ತಪಡಿಸಿದ ಭಾರತ

ಮಾರಿಷಿಯಸ್‌ನಲ್ಲಿ ರಾಮಮಂದಿರ ಉದ್ಘಾಟನೆ ದಿನ ಹಿಂದೂಗಳಿಗೆ ಪ್ರಾರ್ಥನೆಗಾಗಿ 2 ಗಂಟೆ ವಿಶೇಷ ವಿಶ್ರಾಂತಿ

About The Author