ಬೆಂಗಳೂರು: ಮೈತ್ರಿ ಸರ್ಕಾರಕ್ಕೆ ನಮ್ಮ ಕಡೆಯಿಂದ 4 ವರ್ಷ ಯಾವುದೇ ಚ್ಯುತಿಯಾಗೋದಿಲ್ಲ. ಸರ್ಕಾರ ಉಳಿಸಿಕೊಳ್ಳೋ ಜವಾಬ್ದಾರಿ ಕೇವಲ ಜೆಡಿಎಸ್ ನದ್ದಲ್ಲ, ಕಾಂಗ್ರೆಸ್ ನಡೆ ಮೇಲೆ ಸರ್ಕಾರದ ಭವಿಷ್ಯ ಅಡಗಿದೆ ಅಂತ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ದೇವೇಗೌಡರು, ಸಮ್ಮಿಶ್ರ ಸರ್ಕಾರಕ್ಕೆ ಧಕ್ಕೆಯಾಗುವ ರೀತಿ ನಾನು ಹೇಳಿಕೆ ಕೊಡೋದಿಲ್ಲ. ಹಾಗೇ ಕಾಂಗ್ರೆಸ್ ನವರೂ ಸರ್ಕಾರಕ್ಕೆ ಧಕ್ಕೆಯಾಗುವಂತೆ ಯಾವುದೇ ಹೇಳಿಕೆ ನೀಡಬಾರದು. ಸರ್ಕಾರ ಉಳಿಸಿಕೊಳ್ಳೋ ಜವಾಬ್ದಾರಿ ಬರೀ ಜೆಡಿಎಸ್ ನದ್ದಲ್ಲ, ಕಾಂಗ್ರೆಸ್ ಮೇಲೂ ಜವಾಬ್ದಾರಿಯಿದೆ ಅಂತ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ. ಕಾಂಗ್ರೆಸ್ ನಡೆ ಮೇಲೆ ಸರ್ಕಾರದ ಭವಿಷ್ಯ ಅಡಗಿದೆ ಅಂತ ದೇವೇಗೌಡರು ಹೇಳಿದ್ದಾರೆ. ಅಲ್ಲದೆ 4 ವರ್ಷ ಜೆಡಿಎಸ್ ನಿಂದ ಸರ್ಕಾರಕ್ಕೆ ಯಾವುದೆ ತೊಂದರೆಯಾಗೋದಿಲ್ಲ ಅಂತ ಇದೇ ವೇಳೆ ಗೌಡರು ಸ್ಪಷ್ಟಪಡಿಸಿದ್ರು.
ಸಿದ್ದು ಮಾತಿಗೆ ರಾಹುಲ್ ಗಾಂಧಿ ಹೇಳಿದ್ದೇನು?? ಮಿಸ್ ಮಾಡದೇ ಈ ವಿಡಿಯೋ ನೋಡಿ