Dharwad: ಪ್ರತೀ ಎಕರೆಗೆ ₹50 ಸಾವಿರ ನೀಡುವಂತೆ ಸರ್ಕಾರಕ್ಕೆ ರೈತರ ಒತ್ತಾಯ

Dharwad News: ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವುದು ರೈತರಿಗೆ ಸಂತಸದ ಸಂಗತಿ.. ಆದರೆ ಬರ ಪರಿಹಾರವಾಗಿ ಪ್ರತಿ ರೈತರಿಗೆ 2500 ರೂಪಾಯಿ ನೀಡಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.. ಗೊಬ್ಬರದ ಖರ್ಚಿಗೂ ಈ ಹಣ ಸಾಲುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ರೈತರು, 2500ರೂಪಾಯಿ ಪರಿಹಾರದ ನಿರ್ಧಾರವನ್ನು ಕೂಡಲೇ ಹಿಂಪಡೆದು, ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ..

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನಲ್ಲಿ ಮಳೆ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.. ಬಿತ್ತನೆ, ಉಳುಮೆ, ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿರುವ ರೈತರು, ಇದೀಗ ಬೆಳೆ ಕೈಕೊಟ್ಟಿರುವುದರಿಂದ ನಷ್ಟ ಅನುಭವಿಸುವಂತಾಗಿದೆ..

ಕುಂದಗೋಳ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವುದು ರೈತರಿಗೆ ಕೊಂಚ ನೆಮ್ಮದಿ ತಂದಿದೆ.. ಆದರೆ ಸರ್ಕಾರ ಬರ ಪರಿಹಾರವಾಗಿ ಪ್ರತಿ ರೈತರಿಗೆ 2500 ರೂಪಾಯಿ ನೀಡಲು ನಿರ್ಧರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ..

2500 ರೂಪಾಯಿ ಪರಿಹಾರ ಗೊಬ್ಬರದ ಖರ್ಚಿಗೂ ಸಾಲುವುದಿಲ್ಲ.. ನಾವು ಸಾಲ ಮಾಡಿ ಕೃಷಿಗೆ ಲಕ್ಷಾಂತರ ರೂಪಾಯಿ ಹಾಕಿದ್ದೇವೆ.. ಬೆಳೆ ನಷ್ಟದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು.. ಕೇವಲ 2500 ರೂಪಾಯಿ ಪರಿಹಾರದಿಂದ ರೈತರ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಬಸವರಾಜ್ ರೈತರು ಆಗ್ರಹಿಸಿದ್ದಾರೆ..

ಬರದಿಂದಾಗಿ ರೈತರು ಮಾಡಿರುವ ಕೃಷಿ ವೆಚ್ಚವೇ ದೊಡ್ಡ ಹೊರೆಯಾಗಿದೆ.. ಬೆಳೆ ಕೈಕೊಟ್ಟಿರುವ ಸಂದರ್ಭದಲ್ಲಿ ಸಾಲ ತೀರಿಸುವುದೇ ರೈತರಿಗೆ ಸವಾಲಾಗಿದೆ.. ಹೀಗಾಗಿ ಸರ್ಕಾರ ನೀಡಲು ಮುಂದಾಗಿರುವ ಪರಿಹಾರದ ಮೊತ್ತವನ್ನು ಮರುಪರಿಶೀಲಿಸಬೇಕು ಎಂಬುದು ರೈತರ ಒತ್ತಾಯ..

ಪ್ರತಿ ರೈತರಿಗೆ 2500 ರೂಪಾಯಿ ನೀಡುವ ನಿರ್ಧಾರವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು.. ಬರದಿಂದ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 50 ಸಾವಿರ ರೂಪಾಯಿ ಪರಿಹಾರ ನೀಡಬೇಕು.. ರಾಜ್ಯ ಹಾಗೂ ಕೇಂದ್ರ ಸರ್ಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಸೂಕ್ತ ಬರ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಶಂಕರ್ ಗೌಡ ರೈತರು ಒತ್ತಾಯಿಸಿದ್ದಾರೆ..

ಕೇವಲ ಬರ ಘೋಷಣೆ ಮಾಡಿದರೆ ರೈತರ ಸಂಕಷ್ಟ ದೂರವಾಗುವುದಿಲ್ಲ.. ವಾಸ್ತವವಾಗಿ ರೈತರು ಮಾಡಿರುವ ಕೃಷಿ ವೆಚ್ಚ ಮತ್ತು ಬೆಳೆ ನಷ್ಟವನ್ನು ಪರಿಗಣಿಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ..

2500 ರೂಪಾಯಿ ಪರಿಹಾರದ ನಿರ್ಧಾರವನ್ನು ಹಿಂಪಡೆದು, ಪ್ರತಿ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕುಂದಗೋಳ ತಾಲೂಕಿನ ರೈತರು ಒತ್ತಾಯಿಸಿದ್ದಾರೆ..

ಕ್ಯಾಮೆರಾ ಪರ್ಸನ ಹೇಮಂತ್ ಜೋತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ ಹುಬ್ಬಳ್ಳಿ

About The Author