Dharwad News: ಧಾರವಾಡ: ರಾಜ್ಯದಲ್ಲಿ ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದರೆ, ಧಾರವಾಡದಲ್ಲಿ ಬಾಕಿ ಬಿಲ್ ಗಾಗಿ ಗುತ್ತಿಗೆದಾರ ಎನ್ ಆರ್ ನಾಯಕ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಈ ದೂರಿನ ಫಲವಾಗಿ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಬಂಧನವಾಗಿದೆ. ಕಾಮಗಾರಿ ಮಾಡಿದ ಗುತ್ತಿಗೆದಾರನೊಬ್ಬನ ಬಾಕಿ ಬಿಲ್ ನೀಡದೆ ಇರೋ ವಿಚಾರಕ್ಕೆ ಇಂಜಿನಿಯರ ಬಂಧಿಸಲಾಗಿದೆ. ಇಂಜಿನಿಯರ್ ದೇವರಾಜ ಶಿಗ್ಗಾಂವಿ ಎಂಬುವವರು, ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮಂಡವಾಡ ಗ್ರಾಮದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿ ಮಾಡುತ್ತಿದ್ದರು.
ಗುತ್ತಿಗೆದಾರ ಎನ್ ಆರ್ ನಾಯಕ ಅವರ ಬಾಕಿ ಬಿಲ್ ನೀಡುವಂತೆ ಸಣ್ಣ ನೀರಾವರಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದರು. ಸಾಕಷ್ಟು ಬಾರಿ ಪ್ರಸ್ತಾವನೆ ಸಲ್ಲಿಸಿದರೂ, ಸರ್ಕಾರ ಮಾತ್ರ ಹಣ ಬಿಡುಗಡೆ ಮಾಡಲಿಲ್ಲ. 30 ವರ್ಷದಲ್ಲಿ 15ಕ್ಕೂ ಇಂಜಿನಿಯರ್ ಗಳು ವರ್ಗಾವಣೆಯಾಗಿ ಹೋದ್ರು ಬಿಲ್ ಮಾತ್ರ ಬಾಕಿ ಇರಿಸಲಾಗಿದೆ. 30 ವರ್ಷಗಳ ಹಿಂದೆ ಇದೇ ಗುತ್ತಿಗೆದಾರ ಆರ್.ಎನ್.ನಾಯಕ ಕಾಮಗಾರಿ ಮಾಡಿದ್ದರು. ಆದರೆ ಇದುವರೆಗೂ ಬಿಲ್ ಪಾವತಿಸಿಲ್ಲ.
ಸಣ್ಣ ನೀರಾವರಿ ಇಲಾಖೆ, ಒಟ್ಟು 18 ಲಕ್ಷ ರೂಪಾಯಿ ಬಿಲ್ ಬಾಕಿ ಇಟ್ಟುಕೊಂಡಿತ್ತು. 18 ಲಕ್ಷಕ್ಕೆ ಬಡ್ಡಿ ಬೆಳೆದು 30 ವರ್ಷಕ್ಕೆ 3 ಕೋಟಿ 34 ಲಕ್ಷ ರೂಪಾಯಿ ಆಗಿದೆ. ಈ ವಿಚಾರವಾಗಿ ನಾಯಕ ಜಿಲ್ಲಾ ನ್ಯಾಯಾಲಯದ ಮೋರೆ ಹೋಗಿದ್ದರು. ಈ ಕುರಿತು ನ್ಯಾಯಾಲಯದಲ್ಲಿ ಇಂಜಿನಿಯರ್ ಪರ ವಕೀಲರು 15 ದಿನಗಳವರೆಗೆ ಕಾಲಾವಕಾಶ ಕೇಳಿದ್ದರು. ಜಿಲ್ಲಾ ನ್ಯಾಯಾಲಯ ಬಾಡಿ ವಾರೆಂಟ್ ಜಾರಿ ಮಾಡಿ, ಇಂಜಿನಿಯರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.