Health Tips: ಇತ್ತೀಚಿನ ದಿನಗಳಲ್ಲಿ ಹಲವು ವಿವಾಹಿತರು ಎದುರಿಸುತ್ತಿರುವ ಸಮಸ್ಯೆ ಅಂದ್ರೆ, ಸಂತಾನ ಸಮಸ್ಯೆ. ಕೆಲವು ವರದಿಗಳ ಪ್ರಕಾರವಂತೂ, ಮುಂದಿನ ದಿನಗಳಲ್ಲಿ ಹಲವು ಹೆಣ್ಣು ಮಕ್ಕಳು ವಿವಾಹವಾಗುವುದಿಲ್ಲ. ವಿವಾಹವಾದರೂ, ತಾಯಿಯಾಗಲು ಇಚ್ಛಿಸುವುದಿಲ್ಲ ಎಂದು ಬಹಿರಂಗವಾಗಿದೆ. ಆದರೆ ವಿವಾಹವಾದ ಬಳಿಕ ಮಗು ಬೇಕು ಎಂದರೂ, ಹಲವರಿಗೆ ಮಕ್ಕಳಾಗುತ್ತಿಲ್ಲ. ಹಾಗಾದ್ರೆ ಈ ಸಮಸ್ಯೆಗೆ ಕಾರಣವೇನು ಅಂತಾ ತಿಳಿಯೋಣ ಬನ್ನಿ.
ಮೊದಲನೇಯ ಕಾರಣ ಅತಿಯಾದ ಬೊಜ್ಜು. ಅತೀಯಾದ ಬೊಜ್ಜು ಇರುವವರಿಗೆ ಹೆಚ್ಚಾಗಿ ಸಂತಾನ ಹೀನತೆ ಉಂಟಾಗುತ್ತದೆ. ಏಕೆಂದರೆ, ಇದರಿಂದಲೇ ಶುಗರ್ ಹೆಚ್ಚಾಗುತ್ತದೆ. ಬಿಪಿ, ಶುಗರ್ ಕಂಟ್ರೋಲಿನಲ್ಲಿ ಇಲ್ಲದಿದ್ದರೆ, ಅನಾರೋಗ್ಯಕ್ಕೀಡಾಗಬಹುದು. ಅಲ್ಲದೇ, ಮಗು ಗರ್ಭದಲ್ಲಿ ನಿಲ್ಲಲು ಸಾಧ್ಯವಾಗದೇ ಇರಬಹುದು. ಹಾಗಾಗಿ ಮಕ್ಕಳು ಮಾಡಿಕೊಳ್ಳುವ ಮುನ್ನ, ದೇಹದ ಬೊಜ್ಜು ಕರಗಿಸಿಕೊಳ್ಳಿ.
ಎರಡನೇಯ ಕಾರಣ ಅನಾರೋಗ್ಯಕರ ಚಟ. ಧೂಮಪಾನ, ಮದ್ಯಪಾನ ಮಾಡುವುದರಿಂದಲೂ ಸಂತಾನ ಹೀನತೆ ಉಂಟಾಗುತ್ತದೆ. ಇದರಿಂದ ಗರ್ಭಪಾತ ಉಂಟಾಗಬಹುದು. ಗರ್ಭ ಧರಿಸಲಾಗದೇಯೂ ಇರಬಹುದು. ಪತಿ- ಪತ್ನಿ ಇಬ್ಬರಿಗೂ ಇಂಥ ಚಟ ಇರದಿರುವುದು ತುಂಬಾ ಮುಖ್ಯವಾಗಿದೆ.
ಮೂರನೇಯ ಕಾರಣ ಅನಾರೋಗ್ಯಕರ ಜೀವನ ಶೈಲಿ. ಸಿಟಿಯಲ್ಲಿರುವ ಹೆಚ್ಚಿನ ದಂಪತಿಗೆ ಮಕ್ಕಳಾಗುತ್ತಿಲ್ಲ. ಇದಕ್ಕೆ ಕಾರಣ, ಬೆಳಿಗ್ಗೆ ಎದ್ದು, ರೆಡಿಯಾಗಿ, ತಿಂಡಿ ತಿನ್ನದೇ, ಗಡಿಬಿಡಿಯಲ್ಲಿ ಆಫೀಸಿಗೆ ಓಡುವುದು. ಹಸಿವಾದಾಗ, ಸಿಕ್ಕಿದ್ದನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವುದು. ಮಧ್ಯಾಹ್ನದ ಊಟ ಹೊತ್ತು ಮೀರಿ ಮಾಡುವುದು. ಸಂಜೆ ಚಾಟ್ಸ್ ತಿಂದು, ರಾತ್ರಿ ಊಟ ಸ್ಕಿಪ್ ಮಾಡಿ, ಟೈಂ ಪಾಸ್ ಮಾಡಿ, ಲೇಟಾಗಿ ಮಲಗುವುದು. ಇದೇ ಅನಾರೋಗ್ಯಕರ ಜೀವನ ಶೈಲಿ. ಇಲ್ಲಿ ನಾವು ಬೆಳಿಗ್ಗೆ ಸರಿಯಾಗಿ ತಿಂಡಿ ತಿನ್ನುವುದು, ಹೊತ್ತಿಗೆ ಸರಿಯಾಗಿ ಊಟ ಮಾಡುವುದು, ಸಂಜೆ ಆರೋಗ್ಯಕರ ತಿಂಡಿ ತಿನ್ನುವುದು, ರಾತ್ರಿ ತಪ್ಪದೇ ಲೈಟ್ ಆಗಿ ಆಹಾರ ಸೇವಿಸುವುದು, ಬೇಗ ಮಲಗುವುದು, ಮತ್ತು ವ್ಯಾಯಾಮವನ್ನು ಅಳವಡಿಸಿಕೊಳ್ಳುವುದು ತುಂಬಾ ಮುಖ್ಯ.
ನಾಲ್ಕನೇಯ ಕಾರಣ ಕೆಲಸದ ಒತ್ತಡ. ಕೆಲಸದ ಟೆನ್ಶನ್, ದುಡ್ಡು ಮಾಡುವ ಇಂಟೆನ್ಶನ್ ಮನುಷ್ಯ ನೆಮ್ಮದಿಯುಕ್ತವಾದ ಜೀವನವನ್ನೇ ಹಾಳು ಮಾಡಿದೆ. ಮನೆಯವರಿಗೂ, ಊಟ, ತಿಂಡಿಗೂ ಸಮಯ ಕೊಡದಿರುವಷ್ಟು ಜನ ಬ್ಯುಸಿಯಾಗಿದ್ದಾರೆ. ಇದೇ ರೀತಿಯಾಗಿರುವ ಕಾರಣಕ್ಕೆ, ಸಂತಾನ ಸಮಸ್ಯೆಯೂ ಹೆಚ್ಚಾಗುತ್ತಿದೆ.