Saturday, July 12, 2025

Latest Posts

Dharwad News: ಧಾರವಾಡದಲ್ಲಿ ನಕಲಿ ಚಿನ್ನ ಮಾರಾಟಕ್ಕೆ ಪ್ರಯತ್ನ ನಡೆಸಿ, ಸಿಕ್ಕಿಬಿದ್ದ ಖದೀಮರು

- Advertisement -

Dharwad News: ಧಾರವಾಡ: ಧಾರವಾಡದಲ್ಲಿ ನಕಲಿ ಚಿನ್ನ ಮಾರಾಟ ಯತ್ನ ನಡೆದಿದ್ದು, ವಂಚಕರಿಬ್ಬರಿಗೆ ಸಾರ್ವಜನಿಕರು ಗೂಸಾ ನೀಡಿದ್ದಾರೆ.

ಧಾರವಾಡದ ಟಿಕಾರೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಕಳೆದ 15 ದಿನಗಳಿಂದ ಈ ವಂಚಕರು ಓಡಾಡುತ್ತಿದ್ದರು. ಆರಂಭದಲ್ಲಿ ಜನರಿಗೆ ಅಸಲಿ ಚಿನ್ನ ತೋರಿಸಿ, ಯಾಮಾರಿಸುತ್ತಿದ್ದ ಖದೀಮರು, ಹಣ ನೀಡಿದ ಮೇಲೆ ನಕಲಿ ಚಿನ್ನ ನೀಡುತ್ತಿದ್ದರು. ಕೆಲ ವ್ಯಾಪಾರಿಗಳು ಇವರಿಂದ ಮೋಸ ಹೋಗಿದ್ದರು. ಆದರೆ ಇಂದು ಬೇರೆ ವ್ಯಾಪಾರಿಗಳಿಗೆ ಈ ಚಿನ್ನ ಮಾರಲು ಯತ್ನಿಸಿದಾಗ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಖದೀಮರು ಸಿಕ್ಕಿಬಿದ್ದಿದ್ದು ಹೇಗೆ..?

ಈ ಮುನ್ನವೇ ಮೋಸ ಹೋಗಿದ್ದ ವ್ಯಾಪಾರಿಗಳು, ಚಿನ್ನ ವ್ಯಾಪಾರಿಗಳಿಗೆ ಮಾಹಿತಿ ನೀಡಿ, ಕಳ್ಳರನ್ನು ಸೆರೆ ಹಿಡಿಯಲು ಪ್ಲಾನ್ ಮಾಡಿದ್ದರು. ಅದೇ ರೀತಿ ವ್ಯಾಪಾರಿಗಳು ಅಲರ್ಟ್ ಆಗಿದ್ದು, ವ್ಯಾಪಾರಕ್ಕೆಂದು ಖದೀಮರು ಅಂಗಡಿಗೆ ಬಂದಾಗ, ಕಳ್ಳರನ್ನು ಹಿಡಿದು ಥಳಿಸಲಾಗಿದೆ.

ಪೋಷನ್ ಜೈನ್ ಎಂಬುವವರ ಅಂಗಡಿಗೆ ವ್ಯಾಪಾರಕ್ಕೆಂದು ಬಂದಾಗ, ಈ ಘಟನೆ ನಡೆದಿದ್ದು, ಬಳಿಕ ಕಳ್ಳರನ್ನು ಶಹರ ಪೊಲೀಸರಿಗೆ ಒಪ್ಪಿಸಲಾಗಿದೆ. ಪೋಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

- Advertisement -

Latest Posts

Don't Miss