- Advertisement -
Gadag News: ಗದಗ: ಸೆಪ್ಟೆಂಬರ್ ನಲ್ಲಿ ಕ್ರಾಂತಿಯಾಗುತ್ತೆ ಎಂದು ಕಾಂಗ್ರೆಸ್ ಸಚಿವ ರಾಜಣ್ಣ ಹೇಳಿದ್ದು, ಗದಗನಲ್ಲಿ ಮಾತನಾಡಿರುವ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೆಪ್ಟೆಂಬರ್ ನಲ್ಲಿ ಕಾಂತ್ರಿಯಾಗುತ್ತೊ.. ಬ್ರಾಂತಿಯಾಗುತ್ತೊ ನೋಡೋಣ ಎಂದಿದ್ದಾರೆ.
ಈಗಾಗ್ಲೆ ಜನರಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಭ್ರಾಂತಿಯಾಗಿದೆ. ಕಾಂಗ್ರೆಸ್ ಆಂತರಿಕೆ ವಿಷಯದ ಬಗ್ಗೆ ಹೆಚ್ಚು ಮಾತಾಡಲ್ಲ. ಕಾಂಗ್ರೆಸ್ ಕಚ್ಚಾಟದಲ್ಲಿ ಎಲ್ಲಿದೆ ಅಭಿವೃದ್ಧಿ..? ಕಚ್ಚಾಟಕ್ಕೂ ಮುನ್ನ ಗ್ಯಾರಂಟಿಯಿಂದಾಗಿ ಅಭಿವೃದ್ಧಿ ಶೂನ್ಯವಾಗಿದೆ. ಸಾಲದ ಶೂಲಕ್ಕೆ ಕರ್ನಾಟಕ ಏರಿದೆ.. ಆರ್ಥಿಕವಾಗಿ ದಿವಾಳಿಯಾಗಿದೆ.. 50 ರಿಂದ 60 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ತೆರಿಗೆಯಿಂದ ವಸೂಲಾಗ್ತಿದೆ.. ಇಷ್ಟಾಗಿಯೂ ಹಣ ಸಾಲುತ್ತಿಲ್ಲ ಅಂದ್ರೆ ಹಣ ಎಲ್ಲಿಗೆ ಹೋಗ್ತಿದೆ.. ಎಂದು ಮಾಜಿ ಸಿಎಂ ಪ್ರಶ್ನಿಸಿದ್ದಾರೆ.
- Advertisement -