Friday, July 18, 2025

Latest Posts

Dharwad News: ಒಂದೇ ದಿನ ಇಬ್ಬರು ಹೃದಯಾಘಾತದಿಂದ ಸಾ*ವು

- Advertisement -

Dharwad News: ಧಾರವಾಡ: ಹಾಸನ, ಶಿವಮೊಗ್ಗದಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಧಾರವಾಡದಲ್ಲಿ ಒಂದೇ ದಿನ ಇಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೃತರನ್ನು ಜಿಲ್ಲೆಯ ನವಲಗುಂದ ಪಟ್ಟಣದ ನಿವಾಸಿ ಮುತ್ತುಪ್ಪ ಶಂಕ್ರಪ್ಪ ಪೂಜಾರ (44) ಹಾಗೂ ನವಲಗುಂದದ ಯಮನೂರ ಗ್ರಾಮದ ನಿವಾಸಿ ಕೇಬಲ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ ಫಕಿರಪ್ಪ ಬಣಗಾರ (45) ಎಂದು ಗುರುತಿಸಲಾಗಿದೆ.

ಸೋಮವಾರ ರಾತ್ರಿ ಇಬ್ಬರು ಕೂಡ ಮಲಗಿದ್ದಾಗ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸದ್ಯ ಹಾಸನದಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.

- Advertisement -

Latest Posts

Don't Miss