Gadag News: ಗದಗ: ಗದಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಅಲ್ಲಿನ ಮಹಿಳೆಯರು ಈ ವಿರುದ್ಧ ಪ್ರತಿಭಟಿಸಿದ್ದಾರೆ.
ಗದಗ ತಾಲೂಕಿನ ಮಲ್ಲಸಮುದ್ರ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಇದರಿಂದ ಹಲವು ಬಡವರ ಮನೆಗಳಲ್ಲಿ ಸಮಸ್ಯೆ ಎದುರಾಗಿದೆ. ಸುಲಭವಾಗಿ, ಕಡಿಮೆ ಬೆಲೆಗೆ ಸಿಗುವ ಮದ್ಯ ಸೇವಿಸುವ ಗಂಡಸರು, ಪತ್ನಿ ಮಕ್ಕಳನ್ನು ಬೀದಿಗೆ ತಳ್ಳುತ್ತಿದ್ದಾರೆ.
ಹೀಗಾಗಿ ಜಿಲ್ಲಾಡಳಿತ ಕಚೇರಿ ಮುಂದೆ ಅನಿರ್ದಿಷ್ಟವಧಿ ಹೋರಾಟಕ್ಕೆ ಗ್ರಾಮದ ಮಹಿಳೆಯರು ನಿರ್ಧರಿಸಿದ್ದಾರೆ. ಹೀಗಾಗಿ ಪ್ರತಿಭಟನೆ ಶುರು ಮಾಡಿರುವ ಮಹಿಳೆಯರು, ಮದ್ಯ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಅಕ್ರಮ ಮದ್ಯ ಮಾರಾಟ ನಿಲ್ಲಿಸದೇ ಹೋದಲ್ಲಿ, ಶರಾಬು ಅಂಗಡಿಗೆ ತಾವೇ ಬೆಂಕಿ ಹಚ್ಚುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದ್ದಾರೆ. ಈ ಹೋರಾಟಕ್ಕೆ ಗ್ರಾಮದ ಕೆಲ ಪುರುಷರು ಕೂಡ ಸಾಥ್ ನೀಡಿದ್ದಾರೆ.
ಇವರ ಹೋರಾಟ ನೋಡಿಯಾದರೂ, ಉಸ್ತುವಾರಿ ಸಚಿವರು ಜಿಡ್ಡು ಹಿಡಿದ ಆಡಳಿತಕ್ಕೆ ಬಿಸಿ, ಮುಟ್ಟಿಸಿ, ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿಸಬೇಕಾಗಿದೆ.