Thursday, November 30, 2023

Latest Posts

’75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು’

- Advertisement -

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್,  ನೂತನ ಸಂಸತ್ ನಲ್ಲಿ ರಾಷ್ಟ್ರಪತಿ ಕರೆದುಕೊಂಡು ಯಾಕೆ ವಾಕ್ ಮಾಡಲಿಲ್ಲ..? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ, ಸೆಲೆಬ್ರಿಟಿ ಕರೆದುಕೊಂಡು ಬಂದು ಮಹಿಳಾ ಮೀಸಲಾತಿ ಪಾಸ್ ಮಾಡಿದ್ರು. ಅವತ್ತು ರಾಷ್ಟ್ರಪತಿ ಎಲ್ಲಿದ್ರು..? ಅವರು ಆದಿವಾಸಿ ಅಲ್ವಾ..? ಎಂದು ಕಾಂಗ್ರೆಸ್‌ನ DNA ನಲ್ಲಿ ಚಿಲ್ಲರೆ ರಾಜಕಾರಣ ಎಂದ ಜೋಶಿಗೆ ಲಾಡ್ ತಿರುಗೇಟು ನೀಡಿದ್ದಾರೆ.

ಅವರ ನೋಟು ಎಲ್ಲಿ ಹೋಯ್ತು..? 75 ವರ್ಷ ನಾವು ಚಿಲ್ಲರೆ ಮೇಲೆ ಕಟ್ಟಿದ ಬುನಾದಿ ಮೇಲೆ ಇವರು ನೋಟು ಮಾಡಿದ್ರು. ಇವರ ನೋಟ ಎಲ್ಲಿ ಹೋಯ್ತು..? ಸೌಥ್ ಇಂಡಿಯನ್ ಹಿರೋಯಿನ್ ಕರೆದುಕೊಂಡು ನೀವು ಮಹಿಳಾ ಬಿಲ್ ಪಾಸ್ ಮಾಡಿದ್ರು. ಅದು ನಮ್ಮದೆ ಅದಕ್ಕೆ ಹೊಸ ಹೆಸರು ಇಟ್ರು.. ನೂತನ ಸಂಸತ್ ನಲ್ಲಿ ಯಾಕೆ ರಾಷ್ಟ್ರಪತಿ ಇರಲಿಲ್ಲ..? ನೀವು ಬಿಜೆಪಿ ಅವರನ್ನ ಕೇಳಿ ಎಂದು ಲಾಡ್ ಪ್ರತಿಕ್ರಿಯಿಸಿದ್ದಾರೆ.

ಆ ಮಹಿಳೆ ಆದಿವಾಸಿ ವಿಧವೆ ಇರೋ ಕಾರಣಕ್ಕೆ ಅವರನ್ನು ಕರೆದಿಲ್ಲ. ಬಿಜೆಪಿದು ಮನಸ್ಥಿತಿ ಇದೆ. ಅದನ್ನು ಒಪ್ಪಿಕೊಳ್ಳಲ್ಲ. 75 ವರ್ಷದಲ್ಲಿ ಎಷ್ಟು ಅಭಿವೃದ್ಧಿ ಆಗಿದೆ. ಇವರು 9 ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ..? ಜೋಶಿ ಅವರು ಸಾಲ‌ಮಾಡಿ ದೇಶ ಅಭಿವೃದ್ಧಿ ಅಂತಾರೆ.. ಚಿಲ್ಲರೆ ಅದು ಇದು ಎಂದ ಜೋಶಿ ಹೇಳ್ತಾರೆ. CAG ಪ್ರಕಾರ ಏನ ಕೆಲಸ ಆಗಿವೆ ಅದರಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.

18 ಕೋಟಿ ಇರೋ ಹೆದ್ದಾರಿ 250 ಕೋಟಿಯಾಗಿದೆ. ಐದು ಹೊಸ ಕಾರ್ಯಕ್ರಮದಲ್ಲಿ ಹಗರಣ ಇದೆ. ರಾಮ ಮಂದಿರದಲ್ಲಿ ಹಗರಣ ಇದೆ.  ಬೇಕಿದ್ರೆ ಜೋಶಿ ಚರ್ಚೆಗೆ ಬರಲಿ. ವಿವಾದಾತ್ಮಕ ವಿಚಾರ ಬಿಟ್ಟು ಜೋಶಿ ಸಾಹೇಬರು ಚರ್ಚೆಗೆ ಬರಲಿ ಎಂದು ಲಾಡ್‌ ಹೇಳಿದ್ದಾರೆ.

ಮೋದಿ‌ ಅವರು 10 ವರ್ಷದಲ್ಲಿ ದೇಶವನ್ನ ದಿವಾಳಿ ಮಾಡಿದ್ದಾರೆ: ಸಚಿವ ಸಂತೋಷ್ ಲಾಡ್

ಹೆಬ್ಬಾಳ್ಕರ್‌ ಲಿಂಗಾಯತ ಲೀಡರ್ ಅಂತಾ ಹೇಳೋ ಅವಶ್ಯಕತೆ ಇದೆಯಾ? ಸಂತೋಷ ಲಾಡ್…..!

- Advertisement -

Latest Posts

Don't Miss