ಓರ್ವ ಅರೆಬೆತ್ತಲೆ ಯುವತಿ, ಮೆಟ್ರೋದಲ್ಲಿ ಪ್ರಯಾಣಿಸಿದ ವೀಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ದೆಹಲಿ ಮೆಟ್ರೋದಲ್ಲಿ ಸೆರೆಯಾದ ವೀಡಿಯೋ ಎಂದು ಹೇಳಲಾಗುತ್ತಿದೆ. ಓರ್ವ ಯುವತಿ ಬ್ರಾ ಮತ್ತು ಚಿಕ್ಕ ಸ್ಕರ್ಟ್ ಹಾಕಿ ಮೆಟ್ರೋದಲ್ಲಿ ಪ್ರಯಾಣಿಸಿದ್ದಾಳೆ. ಎದುರಿದ್ದ ವ್ಯಕ್ತಿ ತಮ್ಮ ಮೊಬೈಲ್‌ನಲ್ಲಿ ಆಕೆಯ ಉಡುಗೆಯ ವೀಡಿಯೋ ಸೆರೆ ಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ.
ಆಕೆ ಆ ಉಡುಗೆ ತೊಟ್ಟು ಬ್ಯಾಗ್ ಹಿಡಿದು ಕುಳಿತಿದ್ದು, ಎದ್ದು ಹೋಗುವಾಗ ಆಕೆಯ ಬಟ್ಟೆಯನ್ನು ನೀವು ಗಮನಿಸಬಹುದು. ಈ ವೀಡಿಯೋ ಟ್ವಿಟರ್‌ನಲ್ಲಿ ಶೇರ್ ಆಗುತ್ತಿದ್ದಂತೆ, ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಹಲವರು ‘ದೆಹಲಿ ಮೆಟ್ರೋ ಸಿಬ್ಬಂದಿಗಳಿಗೆ ಬುದ್ಧಿ ಇಲ್ಲವಾ..? ಈಕೆಯ ಒಳಬಿಟ್ಟುಕೊಂಡಿದ್ದು ಅವರ ತಪ್ಪು. ಅವರ ಮೇಲೆ ಕೇಸ್ ಹಾಕಬೇಕು’ ಎಂದು ಹೇಳಿದ್ದಾರೆ. ಆದರೆ ದೆಹಲಿ ಮೆಟ್ರೋ ರೈಲು ನಿಗಮ ಅಧಿಕಾರಿಗಳು, ಈ ಆರೋಪವನ್ನು ತಳ್ಳಿ ಹಾಕಿದ್ದಾರೆ.
No she is not @uorfi_pic.twitter.com/PPrQYzgiU2
— NCMIndia Council For Men Affairs (@NCMIndiaa) March 31, 2023
ಅವರು ಇಂಥ ಯಾವುದೇ ಘಟನೆ ದೆಹಲಿ ಮೆಟ್ರೋದಲ್ಲಿ ನಡೆದಿಲ್ಲ ಎಂದಿದ್ದಾರೆ. ಅಲ್ಲದೇ ಪ್ರತಿದಿನ ಮೆಟ್ರೋದಲ್ಲಿ 60 ಲಕ್ಷಕ್ಕೂ ಹೆಚ್ಚು ಜನ ಮೆಟ್ರೋದಲ್ಲಿ ಓಡಾಡುತ್ತಾರೆ. ಹಾಗಾಗಿ ನಾವು ಆಕೆಯನ್ನ ಗುರುತಿಸಲು ಆಗಲಿಲ್ಲ. ಈ ರೀತಿ ಉಡುಪು ಧರಿಸಿ, ಮೆಟ್ರೋದಲ್ಲಿ ಓಡಾಡುವರ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ಇಲ್ಲಿನ ಸಿಬ್ಬಂದಿ ಹೇಳಿದ್ದಾರೆ.
ಈಕೆಯ ವೀಡಿಯೋ ಟ್ರೋಲ್ ಆಗಿದ್ದು, ಹಲವರು ಈಕೆಯನ್ನು ಬಾಲಿವುಡ್ ನಟಿ, ಫ್ಯಾಷನ್ ಇನ್‌ಫ್ಲುಯೆನ್ಸರ್ ಊರ್ಫಿ ಜಾವೇದ್‌ಗೆ ಹೋಲಿಸುತ್ತಿದ್ದಾರೆ. ಅಲ್ಲದೇ, ‘ಊರ್ಫಿ ನೀನು ಈಕೆಯೊಂದಿಗೆ ಸ್ಪರ್ಧೆಗೆ ರೆಡಿಯಾಗು’ ಅಂತಾ ಒಬ್ಬರು ಹೇಳಿದ್ದಾರೆ. ‘ಅಲ್ಲಾ ಇವಳು ಊರ್ಫಿ ಅಲ್ಲಾ’ ಅಂತಾ ಕೆಲವರು ಕಾಮೆಂಟ್ ಮಾಡಿದ್ದಾರೆ. ‘ಈಕೆ ದೆಹಲಿಯ ಊರ್ಫಿ ಜಾವೇದ್’ ಎಂದು ಕೆಲವರು ಹಾಸ್ಯ ಮಾಡಿದ್ದಾರೆ.
ಮತ್ತೆ ಕೆಲವರು ‘ಬಡ ಹುಡುಗಿ, ಬಟ್ಟೆ ಖರೀದಿಸಲು ದುಡ್ಡಿಲ್ಲವೆಂದು’ ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬ, ‘ಈಕೆಯ ಪಕ್ಕದಲ್ಲಿ ಕುಳಿತಿರುವ ಯುವತಿಗೆ ಇಷ್ಟು ಇರಿಸುಮುರುಸು ಉಂಟಾಗಿರಬೇಕಾದರೆ, ಇನ್ನು ಗಂಡು ಮಕ್ಕಳಿಗೆ ಹೇಗಾಗಬೇಡ..?’ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಈಕೆಯನ್ನು ಸಪೋರ್ಟ್ ಮಾಡುತ್ತ, ‘ಯಾವ ಬಟ್ಟೆ ಹಾಕಬೇಕು..? ಹೇಗೆ ಬಟ್ಟೆ ಹಾಕಬೇಕು ಅನ್ನೋದು ಅವಳ ಇಷ್ಟ’ ಎಂದು ಹೇಳಿದ್ದಾರೆ.
‘ಭೂ ಹಗರಣದಲ್ಲಿ ಭಾಗಿ ಆಗಿರುವುದು ಸಾಬೀತಾದ್ರೆ ಆತ್ಮಹತ್ಯೆ ಮಾಡಿಕೊಳ್ಳುವೆ’