ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕಷ್ಟಗಳು ಇದ್ದೇ ಇರುತ್ತವೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಉದ್ಯೋಗದ ಸಮಸ್ಯೆಗಳು ಕಾಡುತ್ತಿರುತ್ತವೆ, ಹಣದ ಸಮಸ್ಯೆಗಳು ಅತಿ ಹೆಚ್ಚಾಗಿ ಕಾಡುತ್ತಿರುತ್ತವೆ. ಮನೆಯಲ್ಲಿ ಬರೀ ಜಗಳಗಳಾಗುತ್ತವೆ, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗುವುದಿಲ್ಲ, ನಕಾರಾತ್ಮಕ ಭಾವನೆಗಳೇ ತುಂಬಿರುತ್ತದೆ. ಆರೋಗ್ಯದಲ್ಲಿ ತೊಂದರೆಯಾಗುತ್ತದೆ, ಇನ್ನೂ ಅನೇಕ ರೀತಿಯಾದಂತಹ ಸಮಸ್ಯೆಗಳು ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಕೂಡ ಆಗುತ್ತಲೇ ಇರುತ್ತವೆ. ಆದರೆ ಎಂತಹ ಸಮಸ್ಯೆಗಳು ಬಂದರೂ ಮನುಷ್ಯ ಹೆದರದಂತೆ ಎಲ್ಲಾ ಸಮಸ್ಯೆಗೊಂದು ಪರಿಹಾರ ಇದೆ ಎಂಬುದನ್ನು ಅರ್ಥ ಮಾಡಿಕೊಂಡು ಜೀವನ ನಡೆಸಬೇಕು, ಆಗ ಮಾತ್ರ ಜೀವನ ತುಂಬಾ ಸುಂದರವಾಗಿ ಮತ್ತು ಸರಾಗವಾಗಿ ನಡೆದುಕೊಂಡು ಹೋಗುತ್ತದೆ. ಮುಂಜಾನೆ ಎದ್ದ ತಕ್ಷಣ ಈ ಎರಡು ಶಬ್ದಗಳನ್ನು ನೀವು ಹೇಳುವುದರಿಂದ ನಿಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಗಾದರೆ ಮುಂಜಾನೆ ಎದ್ದ ತಕ್ಷಣ ಹೇಳಬೇಕಾದ ಎರಡು ಶಬ್ದಗಳು ಯಾವುವು ಎಂಬುದನ್ನು ಈ ಸುಂದರವಾದ ಬರವಣಿಗೆ ಮೂಲಕ ಇಂದು ತಿಳಿದುಕೊಳ್ಳೋಣ. ಮುಂಜಾನೆ ಬೇಗ ಎದ್ದು ದಿನನಿತ್ಯದ ಕೆಲಸಗಳನ್ನು ಮುಗಿಸಬೇಕು ಅಂಗಳ ಸಾರಿಸಿ ರಂಗೋಲಿ ಹಾಕಿ ಸ್ನಾನವನ್ನು ಮಾಡಿ ಶ್ರದ್ಧಾಭಕ್ತಿಯಿಂದ ದೇವರ ಸ್ಮರಣೆಯನ್ನು ಮಾಡಬೇಕು ಈ ಶಬ್ದಗಳನ್ನು ಮುಂಜಾನೆ ಎದ್ದ ತಕ್ಷಣ ಹೇಳುವುದರಿಂದ ಸಾಕ್ಷಾತ್ ಶಿವನ ಆಶೀರ್ವಾದ ನಿಮಗೆ ದೊರೆಯುತ್ತದೆ. ಸಕಲ ಸಂಪತ್ತು ವೃದ್ಧಿಯಾಗುತ್ತದೆ. ಸಂತಾನಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿಯಾಗುತ್ತದೆ ಆರ್ಥಿಕ ಪರಿಸ್ಥಿತಿ ಉತ್ತಮವಾಗುತ್ತದೆ. ಮನೆಯಲ್ಲಿ ಸುಖ ಶಾಂತಿ ಮತ್ತು ನೆಮ್ಮದಿ ನೆಲೆಸುತ್ತದೆ. ಮುಂಜಾನೆ ಎದ್ದ ತಕ್ಷಣ ನಿಮ್ಮ ಎರಡು ಕೈಗಳನ್ನು ಜೋಡಿಸಿ ಓಂ ಚುಂ ಸ್ವಾಹ ಲಘು ಮೃತ್ಯುಂಜಯ ಮಂತ್ರವನ್ನು ಜಪಿಸಬೇಕು. ಈ ರೀತಿಯಾಗಿ ಹೇಳುವುದರಿಂದ ನಿಮ್ಮ ಕೆಲಸದಲ್ಲಿ ಏನಾದರೂ ತೊಂದರೆ ಆಗಿದ್ದರೆ ಅದು ಆದಷ್ಟು ಬೇಗ ಪರಿಹಾರವಾಗುತ್ತದೆ. ಇನ್ನು ಎರಡನೆಯದಾಗಿ ನಿಮ್ಮ ಎರಡೂ ಕೈಗಳನ್ನು ಜೋಡಿಸಿ ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರ ಮೂಲೆ ಗೋವಿಂದ ಪ್ರಭಾತೆ ಕರದರ್ಶನಂ ಎಂಬ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು ಜಪಿಸುವುದರಿಂದ ಲಕ್ಷ್ಮೀದೇವಿ ಸರಸ್ವತಿದೇವಿ ಮತ್ತು ಗೋವಿಂದನ ಅನುಗ್ರಹ ನಿಮಗೆ ದೊರೆಯುತ್ತದೆ. ನಿತ್ಯ ನೀವು ಈ ರೀತಿ ಮಾಡುವುದರಿಂದ ನಿಮ್ಮ ದಿನ ಅದ್ಭುತವಾಗಿರುತ್ತದೆ. ಈ ಒಂದು ಚಿಕ್ಕ ಕೆಲಸವನ್ನು ನೀವು ಮುಂಜಾನೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ಉತ್ತಮವಾದ ಬದಲಾವಣೆಗಳಾಗುತ್ತವೆ. ಸಮಸ್ಯೆಗಳಿಂದ ಮುಕ್ತವಾದ ಜೀವನ ನಿಮ್ಮದಾಗುತ್ತದೆ ಎಲ್ಲರಿಗೂ ಒಳ್ಳೆಯದಾಗುತ್ತದೆ.

