Saturday, November 15, 2025

Latest Posts

ಹೆಣ್ಣು ಸಿಗದವರಿಗೆ ಮದುವೆ ಮಾಡಿಸುವ ಭರವಸೆ ಕೊಟ್ಟ ಸಹೋದರರು: ಪಕ್ಷೇತರರ ಪ್ರಣಾಳಿಕೆ ಫುಲ್ ವೈರಲ್..

- Advertisement -

ಬೆಳಗಾವಿ: ಸದ್ಯ ಕರ್ನಾಟಕದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸುದ್ದಿ ಅಂದ್ರೆ, ಕಾಂಗ್ರೆಸ್ ಪ್ರಣಾಳಿಕೆ ಸುದ್ದಿ. ಭಜರಂಗ ದಳ ನಿಷೇಧ ನಿರ್ಧಾರದ ಸುದ್ದಿ. ಆದ್ರೆ ಇದರ ಮಧ್ಯೆಯೂ ಪಕ್ಷೇತರ ಅಭ್ಯರ್ಥಿಯ ಪ್‌ರಣಾಳಿಕೆ ಸಖತ್ ಸದ್ದು ಮಾಡುತ್ತಿದೆ. ಯಾಕಂದ್ರೆ ಅವರು ಅವಿವಾಹಿತ ಗಂಡು ಮಕ್ಕಳಿಗೆ ಹೆಣ್ಣು ಹುಡುಕಿ, ಮದುವೆ ಮಾಡುವುದಾಗಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅರಭಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಮತ್ತು ಗೋಕಾಕ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ, ಪುಂಡಲೀಕ ಕುಳ್ಳೂರ ಈ ರೀತಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಇವರಿಬ್ಬರು ತಮ್ಮ ಪ್ರಣಾಳಿಕೆಯಲ್ಲಿ ಹಲವು ಸೌಕರ್ಯಗಳನ್ನು ನೀಡುವುದರ ಜೊತೆಗೆ, ಅವಿವಾಹಿತ ಗಂಡು ಮಕ್ಕಳಿಗೆ ಮದುವೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಗುರುಪುತ್ರ ಮತ್ತು ಪುಂಡಲೀಕ ಇಬ್ಬರೂ ಸಹೋದರರಾಗಿದ್ದು, ಗೋಕಾಕ್‌ ಮತ್ತು ಅರಭಾವಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇವರಿಬ್ಬರೂ ತಮ್ಮ ಪ್ರಣಾಳಿಕೆಯಲ್ಲಿ ಈ ರೀತಿ ಭರವಸೆ ಕೊಟ್ಟು, ಸಖತ್ ವೈರಲ್ ಆಗಿದ್ದಾರೆ.

ಅಪ್ಪನಿಗೆ ಟಿಕೇಟ್ ಸಿಕ್ಕಿದ್ದಕ್ಕೆ ಗಾಳಿಯಲ್ಲಿ ಗುಂಡು ಹಾರಿಸಿದ ಮಗ..

ವೃದ್ಧನ ಶವವನ್ನು ಫ್ರಿಜ್‌ನಲ್ಲಿರಿಸಿ, ಪೆನ್ಶನ್‌ ಹಣದಿಂದ ಮೋಜು ಮಾಡುತ್ತಿದ್ದ ವ್ಯಕ್ತಿ ಅರೆಸ್ಟ್..

‘ಅಗತ್ಯವಿದ್ದರೆ ನಮ್ಮ ರಾಜ್ಯದಲ್ಲೂ ಭಜರಂಗದಳವನ್ನ ಬ್ಯಾನ್ ಮಾಡುತ್ತೇವೆ’..

- Advertisement -

Latest Posts

Don't Miss