ದಿಲೀಪ್ ಎಲ್ಲಾ ಕೂಲ್ ಆಗಿ ಹ್ಯಾಂಡಲ್ ಮಾಡ್ತಾರೆ : ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು Special Interview

Sandalwood: ಪ್ರೇಮದ ಊರಲಿ ಖ್ಯಾತಿಯ ರಮಿಕಾ ಶಿವು ಅವರು ಈ ಮುಂತೆ ಖುಷಿ ಎಂಬ ಹೆಸರಿನಲ್ಲಿ ಫೇಮಸ್ ಆಗಿದ್ರು. ನೀನಾದೆ ನಾ ಸಿರಿಯಲ್‌ನಲ್ಲಿ ದಿಲೀಪ್ ಜತೆ ನಟಿಸಿದ ಬಳಿಕ ಈ ಜೋಡಿ ದಿಲ್ಖುಶ್ ಎಂದೇ ಹೆಸರು ಮಾಡಿತ್ತು.

ಇದೀಗ ಸಂದರ್ಶನದಲ್ಲಿ ಮಾತನಾಡಿರುವ ರಮಿಕಾ, ದಿಲೀಪ್ ಬಗ್ಗೆ ಮಾತನಾಡಿದ್ದಾರೆ. ನಾನು ಹೆಚ್ಚು ಮಾತನಾಡುವ, ಗಲಿಬಿಲಿಯಾಗುವ ಹುಡುಗಿಯಾದ್ರೆ, ದಿಲೀಪ್ ಎಲ್ಲವನ್ನೂ ಕೂಲ್ ಆಗಿ ಹ್ಯಾಂಡಲ್ ಮಾಡುವ ಹುಡುಗಾ. ಮುಂಚೆ ಎಲ್ಲ ಅವರು ಮಾತನಾಡಿಸಿದರೂ ನಾನು ಹೆಚ್ಚು ಮಾತನಾಡುತ್ತಿರಲಿಲ್ಲ. ಆದರೆ ಅವರು ಪದೇ ಪದೇ ಬಂದು ಮಾತನಾಡಿಸಿದಾಗ, ನಾನು ಬೇರೆ ಬೇರೆ ನೆಪ ಹೇಳುತ್ತಿದ್ದೆ. ನನಗೆ ಆರೋಗ್ಯ ಸರಿ ಇಲ್ಲ, ನನಗೆ ತಲೆನೋವು ಆ ರೀತಿ ಎಲ್ಲ ಸುಳ್ಳು ಹೇಳುತ್ತಿದ್ದೆ.

1 ದಿನಾ ಬಂದು ನಾನು ನಿನಗೆ ಹೆಂಗೆ ಟಾರ್ಚರ್ ಕ“ಡ್ತೀನಿ ನೋಡು ಅಂತಾ ಏಕವಚನದಲ್ಲೇ ಮಾತಾಡ್ಸಿದ್ರು. ಆಗ ನಾನು ಮನಸ್ಸಿನಲ್ಲೇ ಇವನ್ಯಾವನು ನನ್ ಜತೆ ಹಿಂಗ್ ಮಾತಾಡ್ತಿದಾನೆ ಅಂತಾ ಹೇಳಿ, ಅವ್ರಿಗೂ ನಾನು ಆಗಾ ಹೇಳ್ದೆ, ನೋಡೋಣಾ ಯಾರ್ ಯಾರಿಗೆ ಟಾರ್ಚರ್ ಕ“ಡ್ತಾರೆ ಅಂತಾ. ಅದೇ ರೀತಿ ಆಗೋಯ್ತು. ಆಮೇಲೆ ನಮ್ಮಿಬ್ಬರ ಮಧ್ಯ ಬಾಂಡಿಂಗ್ ಬೆಳೀತು ಅಂತಾ ದಿಲೀಪ್ ಗೆಳೆತನದ ಬಗ್ಗೆ ರಮಿಕಾ ಮಾತನಾಡಿದ್ದಾರೆ. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.

About The Author