ಸಿನಿ ಜಗತ್ತಿನಲ್ಲಿ ವಿಚ್ಛೇದನ ಅನ್ನೋದೇನೂ ದೊಡ್ಡ ವಿಷಯವಲ್ಲ. ಹಲವಾರು ನಿರ್ದೇಶಕಕರು, ನಿರ್ಮಾಪಕರು, ನಟ, ನಟಿಯರು ವಿಚ್ಛೇದನ ಪಡೆದು, ಮರು ಮದುವೆಯಾದವರಿದ್ದಾರೆ. ಆದ್ರೆ ಇತ್ತೀಚೆಗೆ ವಿಚ್ಛೇದನ ಪಡೆಯುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಂತಾ, ಧನುಷ್ ನಂತರ ಈಗ ತಮಿಳಿನ ನಿರ್ದೇಶಕರು ತಮ್ಮ ಪತ್ನಿಗೆ ವಿಚ್ಛೇದನ ನೀಡಿದ್ದಾರೆ. ತಮಿಳು ನಿರ್ದೇಶಕ ಬಾಲ, ತಮ್ಮ ಪತ್ನಿ ಮಲಾರ್‌ಗೆ ಡಿವೋರ್ಸ್ ನೀಡಿದ್ದಾರೆ.
ನಾಲ್ಕು ವರ್ಷಗಳಿಂದ ದಂಪತಿ ಮಧ್ಯೆ ವೈಮನಸ್ಸು ಬೆಳೆದಿದ್ದು, 4 ವರ್ಷಗಳಿಂದಲೂ ಇಬ್ಬರೂ ಬೇರೆ ಬೇರೆ ವಾಸಿಸುತ್ತಿದ್ದರು. ಈಗ ಡಿವೋರ್ಸ್ಗೆ ಅಪ್ಲೈ ಮಾಡಿದ್ದಾರೆ. ಬಾಲ ಮತ್ತು ಮಲಾರ್ ಜುಲೈ7ರಂದು 2004ರಲ್ಲಿ ಮದುವೆಯಾಗಿದ್ದರು. 18 ವರ್ಷಗಳ ಕಾಲ ಸಂಸಾರ ನಡೆಸಿದ ಇವರಿಗೆ ಓರ್ವ ಪುತ್ರಿ ಇದ್ದಾಳೆ. ತಮಿಳಿನಲ್ಲಿ ಪ್ರಸಿದ್ಧ ನಿರ್ದೇಶಕರಾಗಿರುವ ಬಾಲ ಅವರು ಕೊನೆದಾಗಿ, ತಮಿಳಿನಲ್ಲಿ ಅರ್ಜುನ್ ರೆಡ್ಡಿ ರಿಮೇಕ್ ವರ್ಮಾ ಸಿನಿಮಾ ಡೈರೆಕ್ಟ್ ಮಾಡಿದ್ದಾರೆ. ಸದ್ಯ ನಟ ಸೂರ್ಯಾ ಅವರ ಹೊಸ ಚಿತ್ರಕ್ಕೆ ಬಾಲ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆಂದು ಸುದ್ದಿ ಇದೆ.
ವಿಚ್ಛೇದನದ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ಸಮಂತಾ- ನಾಗಚೈತನ್ಯ, ಧನುಷ್- ಐಶ್ವರ್ಯಾ, ಮತ್ತು ಕಿರಣ್ ರಾವ್- ಅಮೀರ್ ಖಾನ್ ಡಿವೋರ್ಸ್ ಪಡೆದುಕೊಂಡಿದ್ದಾರೆ. ಹೀಗೆ ಸಿನಿರಂಗದಲ್ಲಿ ನಡೆಯುವ ವಿಚ್ಛೇದನಕ್ಕೆ ಹೆಚ್ಚಾಗಿ ಸಮಯ ಕೊಡದಿರುವುದೇ ಮುಖ್ಯ ಕಾರಣವಾಗಿದೆ.