೨೦೧೯ರಲ್ಲಿ ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಸ್ಥಳ ಮಹಜರು ವೇಳೆ ಎನ್‌ಕೌಂಟರ್ ಮಾಡಲಾಗಿತ್ತು. ಈ ಎನ್‌ಕೌಂಟರ್ ಅಸಲಿ ಎನ್ನುವ ಸಾಕ್ಷö್ಯ ಒದಗಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ನ್ಯಾ? ಸಿರ್‌ಪುರ್‌ಕರ್ ಆಯೋಗ ಹೇಳಿದೆ..
ಈ ಎನ್‌ಕೌಂಟರ್ ಮಾಡಿದ್ದು ಕನ್ನಡಿಗ ಸಜ್ಜನರ್ ಉಸ್ತುವಾರಿಯಲ್ಲಿ. ಅಂದಿನ ಸೈಬರಾಬಾದ್ ಪೊಲೀಸ್ ಆಯುಕ್ತರಾಗಿದ್ದ ಹುಬ್ಬಳ್ಳಿ ಮೂಲದ ವಿಶ್ವನಾಥ್ ಸಜ್ಜನರ್ ಈ ಎನ್‌ಕೌಂಟರ್ ಮಾಡಿದ ನಂತ್ರ ಸಜ್ಜನರಿಂದ ದುರ್ಜನರ ಸಂಹಾರ ಅಂತ ಹೆಡ್‌ಲೈನ್ ಬಂದಿತ್ತು. ಅತ್ಯಚಾರ ಆರೋಪಿಗಳನ್ನು ಶೂಟ್ ಮಾಡಿದ್ದಕ್ಕೆ ಹೂವಿನ ಅಭಿಷೇಕದ ಸ್ವಾಗತ ಕೂಡ ಸಿಕ್ಕಿತ್ತು. ಈ ಘಟನೆಯಿಂದ ದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೇಶ ಹೇಗೆ ರಿಯಾಕ್ಟ್ ಮಾಡಿತ್ತೋ ಅಷ್ಟೇ ಆವೇಶದಿಂದ ದೇಶ ರಿಯಾಕ್ಟ್ ಆಗಿತ್ತು.
ಆದರೆ ಈಗ ಕಾನೂನು ಎನ್‌ಕೌಂಟರ್‌ನಲ್ಲಿದ್ದ ೧೦ ಪೊಲೀಸರ ವಿರುದ್ಧ ಕೊಲೆ ಕೇಸಿಗೆ ಶಿಫಾರಸು ಮಾಡಿದೆ.
ಘಟನೆ ಏನು ಅಂತ ವಿವರವಾಗಿ ಹೇಳೋದಾದ್ರೆ ೨೦೧೯ ನವೆಂಬರ್ ೨೭ರಂದು ೨೭ರ ಹರೆಯದ ಪಶುವೈದ್ಯೆಯನ್ನು ನಾಲ್ವರು ದುರುಳರು ಅತ್ಯಾಚಾರ ಮಾಡಿ ಸುಟ್ಟು ಹಾಕಿದ್ದರು. ಈ ಪ್ರಕರಣದಲ್ಲಿ ಮೊಹಮ್ಮದ್ ಆರೀಫ್, ಚಿಂತಕುAಟ್ಲು ಚೆನ್ನ ಕೇಶವುಲು, ಜೊಲ್ಲು ಶಿವ, ಜೊಲ್ಲು ನವೀನ್‌ರನ್ನು ಬಂಧಿಸಲಾಗಿತ್ತು. ಸ್ಥಳ ಮಹಜರಿಗೆ ೨೦೧೯ ಡಿಸೆಂಬರ್ ೬ ರಂದು ಈ ನಾಲ್ವರನ್ನೂ ಕರೆದುಕೊಂಡು ಹೋಗಿದ್ದಾಗ ನಾಲ್ವರು ತಪ್ಪಿಸಿಕೊಳ್ಳಲು ಯತ್ನಿಸಿದ್ರು ಅಂತ ಎನ್‌ಕೌಂಟರ್ ಮಾಡಿ ಸಾಯಿಸಲಾಗಿತ್ತು.
ಆದರೆ ಇದು ನಕಲಿ ಎನ್‌ಕೌಂಟರ್ ಅನ್ನೋ ಆರೋಪ ಕೇಳಿ ಬಂದಿದ್ದರಿAದ ಕೋರ್ಟ್ ತನಿಖಾ ಆಯೋಗ ರಚಿಸಿತ್ತು.
ಆದರೆ ಈಗ ಎಫ್‌ಐಆರ್‌ಗೆ ಸೂಚಿಸಿದ ಹೆಸರುಗಳಲ್ಲಿ ವಿಶ್ವನಾಥ್ ಸಜ್ಜನವರ್ ಹೆಸರಿಲ್ಲ. ತೆಲಂಗಾಣ ಕೋರ್ಟ್ನಲ್ಲಿ ವಿಚಾರಣೆ ಮಾಡಲು ಹೈಕೋರ್ಟ್ ಆದೇಶ. ಒಂದು ಕಡೆ ಆರೋಪಿಗಳಿಗೆ ಶಿಕ್ಷೆ ಆಗಬೇಕಿತ್ತು. ಆದ್ರೆ ಇದು ಬ್ಯೂಟಿ ಆಫ್ ಕಾನ್‌ಸ್ಟಿಟ್ಯೂಷನ್. ಮುಂಬೈ ತಾಜ್ ದಾಳಿಯಲ್ಲಿ ಸಿಕ್ಕಿಬಿದ್ದ ಏಕೈಕ ಉಗ್ರ ಕಸಬ್‌ನನ್ನ ವಿಚಾರಣೆಗೆ ಅಂತ ವರ್ಷಗಟ್ಟಲೆ ಬಿರಿಯಾನಿ ಕೊಟ್ಟು ಸಾಕಿದ್ರು ಅಜ್ಮಲ್ ಕಸಬ್ ನೋಡ್ಕೊಳ್ಳೋಕೆ ವರ್ಷಕ್ಕೆ ಕೋಟಿಗಟ್ಟಲೆ ಸರ್ಕಾರ ಖರ್ಚು ಮಾಡ್ತು ಅನ್ನೋದು ಎಷ್ಟು ವಿಚಿತ್ರ ಅಲ್ವಾ ಈ ಸಂವಿಧಾನ ಅನಿಸಿದ್ರೂ, ಒಬ್ಬ ಖೈದಿಯನ್ನೂ ಒಬ್ಬ ಅಪರಾಧಿಯನ್ನೂ ಅವನ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಕೀಳಾಗಿ ನಡೆಸಿಕೊಳ್ಳದ ನಮ್ಮ ಸಂವಿಧಾನದ ಬಗ್ಗೆ ಹೆಮ್ಮೆಯೂ ಆಗುತ್ತೆ.
ಈ ಮಣ್ಣಿನ ಗುಣಾನೇ ಅದಲ್ವಾ..? ವೈರಿಗೂ ಒಳ್ಳೆಯದ್ದನ್ನೇ ಬಯಸೋದು..
ಓಂ, ಕರ್ನಾಟಕ ಟಿವಿ