Sunday, September 8, 2024

Latest Posts

Neeraj Chopraಗೆ ವಿಶಿಷ್ಟ ಸೇವಾ ಪದಕ ಪ್ರಶಸ್ತಿ ಗೌರವ..!

- Advertisement -

ನವದೆಹಲಿ : ಒಲಂಪಿಕ್ ನಲ್ಲಿ ಜಾವೆಲಿನ್ ಥ್ರೋ (Javelin throw)ಮೂಲಕ ಭಾರತಕ್ಕೆ ಚಿನ್ನದ ಪದಕ ತಂದು ಕೊಟ್ಟಿದ್ದಂತಹ ನೀರಜ್ ಚೋಪ್ರಾ (Neeraj Chopra) ವಿಶಿಷ್ಟ ಸೇವಾ ಪದಕ ಪ್ರಶಸ್ತಿಗೆ(Vishisht Seva Medal) ಆಯ್ಕೆಯಾಗಿದ್ದಾರೆ.ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಆಗಿದ್ದಾರೆ. ಈ ಬಾರಿ ಈ ಪ್ರಶಸ್ತಿಯನ್ನು 29 ಮಂದಿಗೆ ನೀಡಿ ಗೌರವಿಸಲಾಗುತ್ತಿದೆ. ಇಂದು ಸಂಜೆ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ರವರು ರಾಷ್ಟ್ರಪತಿ ಭವನ(Rashtrapati Bhavan)ದಲ್ಲಿ 384 ರಕ್ಷಣಾ ಸಿಬ್ಬಂದಿಗೆ ಶೌರ್ಯ ಮತ್ತು ಇತರ ಪ್ರಶಸ್ತಿಗಳೊಂದಿಗೆ ಗೌರವಿಸಲಿದ್ದಾರೆ. 12 ಶೌರ್ಯ ಚಕ್ರಗಳು(Shaurya Chakra), 29 ವಿಶಿಷ್ಟ ಸೇವಾ ಪದಕಗಳು, ನಾಲ್ಕು ಉತ್ತಮ ಯುದ್ದ ಸೇವಾ ಪದಕಗಳು, 53 ಅತಿ ವಿಶಿಷ್ಟ ಸೇವಾ ಪದಕಗಳು, 13 ಯುದ್ಧ ಸೇವಾ ಪದಕಗಳನ್ನು ನೀಡಿ ಗೌರವಿಸಲಾಗುತ್ತಿದೆ.

- Advertisement -

Latest Posts

Don't Miss