Hubballi News: ಹುಬ್ಬಳ್ಳಿ: ಹಳ್ಳಿಯಿಂದ ದಿಲ್ಲಿಯವರೆಗೆ ಬಾನಂಗಳದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವುದು ಹುಬ್ಬಳ್ಳಿಯ ಬೆಂಗೇರಿ ಖಾದಿ ಗ್ರಾಮೋದ್ಯೋಗ ರಾಷ್ಟ್ರೀಯ ಧ್ವಜ. ಆದರೆ ಕೇಂದ್ರ ಸರ್ಕಾರದ ಹಾಗೂ ಕೇಂದ್ರ ಗೃಹ ಸಚಿವಾಲಯದ ಒಂದೇ ಒಂದು ನಿರ್ಧಾರ ಅಕ್ಷರಶಃ ಖಾದಿ ಗ್ರಾಮೋದ್ಯೋಗವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಕಳೆದ ವರ್ಷ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಆಚರಿಸಲು ಧ್ವಜ ನೀತಿಯನ್ನು ತಿದ್ದುಪಡಿ ಮಾಡಿದ್ದ ಕೇಂದ್ರ ಗೃಹ ಇಲಾಖೆ. ಪಾಲಿಸ್ಟರ್ ಧ್ವಜಕ್ಕೆ ಅನುಮತಿ ನೀಡಿತ್ತು. ಈ ನಿಟ್ಟಿನಲ್ಲಿ ಖಾದಿ ಗ್ರಾಮೋದ್ಯೋಗ ಸಂಕಷ್ಟದ ಸುಳಿಯಲ್ಲಿ ಸಿಲುಕಿತು. ಈಗ ಆಜಾದಿ ಕಾ ಅಮೃತ ಮಹೋತ್ಸವ ಮುಗಿದಿದೆ. ತಿದ್ದುಪಡಿಯನ್ನು ವಾಪಸ್ ಪಡೆಯುತ್ತಾ ಕೇಂದ್ರ ಸರ್ಕಾರ ಎಂಬುವುದು ಖಾದಿ ಗ್ರಾಮೋದ್ಯೋಗದ ಪ್ರಶ್ನೆಯಾಗಿದೆ.
ಸ್ವಾತಂತ್ರ್ಯ ಪೂರ್ವ ಕಾಲದಿಂದ ಈ ವರೆಗೆ ಬರೀ ಖಾದಿ ಹಾಗೂ ರೇಷ್ಮೆ ಬಟ್ಟೆಯಿಂದ ರಾಷ್ಟ್ರಧ್ವಜ ತಯಾರಿಸಲಾಗುತ್ತಿತ್ತು. ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಹರ ಘರ ತಿರಂಗಾ ಅಭಿಯಾನ ಮಾಡಿದ್ದ ಕೇಂದ್ರ ಸರ್ಕಾರ. ಈ ಅಭಿಯಾನ ಯಶಸ್ವಿ ಮಾಡಲು ‘ತಿರಂಗಾ’ ವನ್ನು ಪಾಲಿಸ್ಟರ್ ಬಟ್ಟೆಯಿಂದಲೂ ತಯಾರಿಸಲು ಅಸ್ತು ಎಂದಿತ್ತು. ತಿರಂಗಾ, ಪಾಲಿಸ್ಟರ್ ಬಟ್ಟೆ ಬಳಕೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ರಾಷ್ಟ್ರಧ್ವಜ” ಉಳಿಸಲು ನಿಮ್ಮ ಕರ್ನಾಟಕ ಟಿವಿ ವಿಶೇಷ ಅಭಿಯಾನ ಕೂಡ ಮಾಡಿತ್ತು. ಅಭಿಯಾನಕ್ಕೆ ಅನೇಕ ಚಿಂತಕರು ಸಹ ಕೈಜೋಡಿಸಿದ್ದರು. ಅಲ್ಲದೆ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ ಕೂಡ ಹೊಸ ರಾಷ್ಟ್ರಧ್ವಜ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಈಗ ಧ್ವಜ ನೀತಿ ಸಂಹಿತೆ ಹಿಂಪಡೆಯಲು ಸರ್ಕಾರ ಮೀನಾಮೇಷ ಏಣಿಸುತ್ತಿದೆ.
ಇನ್ನೂ ಸಾಕಷ್ಟು ವಿರೋಧಗಳ ನಡುವೆಯೂ ತಿರಂಗಾವನ್ನು ಪಾಲಿಸ್ಟರ್ ಬಟ್ಟೆ ಬಳಕೆ, ಯಂತ್ರದಿಂದಲೂ ತಯಾರಿಸಲು ಕೇಂದ್ರ ಸರ್ಕಾರ ನಿಶಾನೆ ತೋರಿಸಿತ್ತು. ಈಗ ಅಮೃತ ಮಹೋತ್ಸವ ಮುಗಿದು ಒಂದು ವರ್ಷ ಕಳೆದಿದೆ. ವರ್ಷ ಕಳೆದರೂ ರಾಷ್ಟ್ರಧ್ವಜ ನೀತಿ ಸಂಹಿತೆಯನ್ನ ಕೇಂದ್ರ ಸರ್ಕಾರ ವಾಪಸ್ ಪಡೆದಿಲ್ಲ. 76ನೇ ಸ್ವಾತಂತ್ರ್ಯೋತ್ಸವಕ್ಕೆ ಇನ್ನೂ ನಾಲ್ಕು ದಿನಗಳು ಮಾತ್ರ ಬಾಕಿ ಇದೆ. ಈ ಸ್ವಾತಂತ್ರ್ಯೋತ್ಸವಕ್ಕೆ ಧ್ವಜ ನೀತಿಯನ್ನು ವಾಪಸ್ ಪಡೆಯಬೇಕಿದೆ. ಅಲ್ಲದೇ ವಾಪಸ್ ಪಡೆದು ರಾಷ್ಟ್ರಧ್ವಜದ ಗೌರವವನ್ನ ಹೆಚ್ಚಿಸುವ ಕೆಲಸಕ್ಕೆ ಪ್ರಧಾನಿ ನರೇಂದ್ರ ಮೋದಿ ಕೈಹಾಕಬೇಕಿದೆ.
ಒಟ್ಟಿನಲ್ಲಿ ಹುಬ್ಬಳ್ಳಿಯ ಬೆಂಗೇರಿಯ ಈ ಖಾದಿ ಕೇಂದ್ರ ರಾಷ್ಟ್ರಧ್ವಜ ತಯಾರಿಸುವ ರಾಷ್ಟ್ರದ ಏಕೈಕ ಅಧಿಕೃತ ಸಂಸ್ಥೆ. ಧ್ವಜಸಂಹಿತೆ ಅನುಸಾರವಾಗಿ ಅಗತ್ಯಕ್ಕೆ ತಕ್ಕಂತೆ ವಿವಿಧ ಅಳತೆಯ ತಿರಂಗಾ ಉತ್ಪಾದಿಸುತ್ತ ಬಂದಿದೆ. ಇದು ಕೈಮಗ್ಗ ನೇಯ್ಗೆಯಿಂದಲೇ ಧ್ವಜ ರೂಪಿಸುತ್ತಿದೆ. ಕೈಮಗ್ಗ, ಬಣ್ಣ ಹಾಕುವುದು, ಅಶೋಕ ಚಕ್ರ ಮುದ್ರಣ, ಹೊಲಿಗೆ, ಹಿಡಿಕೆ ಅಳವಡಿಕೆ ಇತ್ಯಾದಿ ಕೆಲಸ ಅವಲಂಬಿಸಿ ನೂರಾರು ಕುಟುಂಬಗಳಿವೆ. ಈ ನಿಟ್ಟಿನಲ್ಲಿ ಸರ್ಕಾರದ ಮಹತ್ವದ ನಿರ್ಧಾರವನ್ನು ಎದುರು ನೋಡುತ್ತಿವೆ.
ಗುತ್ತಿಗೆದಾರರು ಬೇರೆ ನಾಯಕರ ಭೇಟಿ ಮಾಡೋದನ್ನು ತಡೆಯಲಾಗದು: ಡಿಸಿಎಂ ಡಿ.ಕೆ. ಶಿವಕುಮಾರ್
‘ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ’
ಭಗವಂತನನ್ನು ಪ್ರಶ್ನೆ ಮಾಡಲಾಗದು, ಆದರೆ ಸ್ಪಂದನಾ ಸಾವು ಘೋರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್




