ಆಡುಗಳಿಗೆ ಬಸ್ ಟಿಕೆಟ್ ವಿತರಣೆ..!

ಯಾದಗಿರಿ: ಮೂರು ಆಡುಗಳಿಗೆ ಬಸ್ ಟಿಕೆಟ್ ಪಡೆದು ಬಸ್ಸಿನಲ್ಲಿ ಪ್ರಯಾಣ ಮಾಡಿದ ಅಪರೂಪದ ಘಟನೆ ಯಾದಗಿರಿ ಜಿಲ್ಲೆಯಲ್ಲಿ ನಡೆದಿದೆ. ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕು ಕುಡ್ಲಾ ಗ್ರಾಮದ ರೈತರಾದ ಸುನೀಲ್ ಹಾಗೂ ರಾಮಲಿಂಗಪ್ಪ, ಪ್ರತಿ ಮಂಗಳವಾರ ಯಾದಗಿರಿ ನಗರದಲ್ಲಿ ನಡೆಯುವ ಕುರಿ ಸಂತೆಗೆ ಬಂದಿದ್ದರು. ಈ ಕುರಿಗಳ ಸಂತೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ತುಂಬಾ ಫೇಮಸ್ ಆಗಿದೆ. ಅದರಂತೆ ಆಡು ಕರಿದಿಸಿದ ನಂತರ ರೈತರು ಆಡುಗಳೊಂದಿಗೆ ಸರ್ಕಾರಿ ಬಸ್ ಹತ್ತಿದ್ದಾರೆ, ಅದನ್ನು ಗಮನಿಸಿದ ಬಸ್ ಕಂಡಕ್ಟರ್ ಎಲ್ಲಿಗೆ ಹೋಗಬೇಕು ಎಂದು ವಿಚಾರಿಸಿದ್ದಾರೆ. ನಂತರ ಮೂರು ಆಡುಗಳಿಗೆ ಪ್ರತ್ಯೇಕ ಫುಲ್ ಟಿಕೆಟ್ ಕೊಡುವುದರ ಮೂಲಕ ಬಸ್ಸಿನಲ್ಲಿ ಪ್ರಯಾಣ ಮಾಡಲು ಅವಕಾಶ ಮಾಡಿಕೊಟ್ಟರು.

About The Author