Hubballi News: ಹುಬ್ಬಳ್ಳಿ : ಗಬ್ಬೂರಿನ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ಟೋಲ್ ಪ್ಲಾಜಾದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ.ದಾಮೋದರ ಅವರ ನೇತೃತ್ವದಲ್ಲಿ ಟೋಲ್ ಗೇಟ್ ಮುಖಾಂತರ ಹಾದು ಹೋಗುವ ಬಸ್ಸುಗಳು, ಸರಕು ವಾಹನಗಳು, ಮ್ಯಾಕ್ಸಿಕ್ಯಾಬ್‌ಗಳು, ಮೋಟಾರು ಕ್ಯಾಬ್‌ಗಳು ಹಾಗೂ ಖಾಸಗಿ ವಾಹನಗಳ ಚಾಲಕರು ಮತ್ತು ಪ್ರಯಾಣಿಕರುಗಳಿಗೆ ರಸ್ತೆ ಸುರಕ್ಷತೆಯ ಕುರಿತಂತೆ ಅರಿವು ಮೂಡಿಸುವ ಕರಪತ್ರಗಳನ್ನು ವಿತರಿಸಿ, ಜಾಗೃತಿ ಮೂಡಿಸಲಾಯಿತು.
ವಾಹನಗಳ ಮೇಲೆ ರಸ್ತೆ ಸುರಕ್ಷತೆ ಘೋಷಣೆಗಳುಳ್ಳ ಸ್ಟಿಕ್ಕರ್‌ಗಳನ್ನು ಅಂಟಿಸಿ, ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಜಾಗೃತಿ ಅಭಿಯಾನದಲ್ಲಿ ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ವಿನಾಯಕ ನಾಯಕ, ಸಾರಿಗೆ ಇಲಾಖೆಯ ಅಧೀಕ್ಷಕರಾದ ಕೀರ್ತಿ ಹುಕ್ಕೇರಿ, ಪ್ರಥಮ ದರ್ಜೆ ಸಹಾಯಕರಾದ ಜಿ.ವಿ.ದಿನಮಣಿ, ಎಸ್.ವೈ.ಕಂಬಾರ, ವಿ.ಎ.ಕಂಬಿ, ಪ್ರೀತಿ ಗಂಗಾಧರ, ವಾಹನ ಚಾಲಕರಾದ ಅಬ್ದುಲ್ ಸಲಾಂ, ಶಂಕರ ಕಲಾಲ ಸೇರಿದಂತೆ ಸಾರಿಗೆ ಇಲಾಖೆಯ ಸಿಬ್ಬಂದಿ ಇತರರು ಭಾಗವಹಿಸಿದ್ದರು.
ಕಾಂಗ್ರೆಸ್‌ನ ಚಿಲ್ಲರೆತನಕ್ಕೆ, ಬಾಲಿಶತನಕ್ಕೆ ಒಂದು ಮಿತಿ ಇರಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
‘ಇದು ಮುಂದುವರಿದರೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಈ ನಾಡಿನ ಪ್ರಭುಗಳಿಗೆ ಮೋಸ ಮಾಡಿದಂತಾಗುತ್ತದೆ’